ಬಿಸಿಸಿಐ ಹಣಕಾಸು ಸಮಿತಿಗೆ ವಿನಯ್‌ ಮೃತ್ಯುಂಜಯ ನೇಮಕ

7

ಬಿಸಿಸಿಐ ಹಣಕಾಸು ಸಮಿತಿಗೆ ವಿನಯ್‌ ಮೃತ್ಯುಂಜಯ ನೇಮಕ

Published:
Updated:
ಬಿಸಿಸಿಐ ಹಣಕಾಸು ಸಮಿತಿಗೆ ವಿನಯ್‌ ಮೃತ್ಯುಂಜಯ ನೇಮಕ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಮಾಧ್ಯಮ ವಕ್ತಾರ ವಿನಯ್‌ ಮೃತ್ಯುಂಜಯ ಅವರನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹಣಕಾಸು ಸಮಿತಿಗೆ ನೇಮಕ ಮಾಡಲಾಗಿದೆ.

ಈ ವಿಷಯವನ್ನು ಬಿಸಿಸಿಐ ಅಧ್ಯಕ್ಷ ಸಿ.ಕೆ.ಖನ್ನಾ, ಗುರುವಾರ ತಿಳಿಸಿದ್ದಾರೆ. ಈ ಹಿಂದೆ ಹುದ್ದೆಯಲ್ಲಿದ್ದ ತಮಿಳುನಾಡು ಕ್ರಿಕೆಟ್‌ ಸಂಸ್ಥೆಯ (ಟಿಎನ್‌ಸಿಎ) ಕಾಶಿ ವಿಶ್ವನಾಥನ್‌ ಅವರು ರಾಜೀನಾಮೆ ನೀಡಿದ್ದಾರೆ. ಅವರಿಂದ ತೆರವಾಗಿರುವ ಸ್ಥಾನಕ್ಕೆ ವಿನಯ್‌ ಅವರನ್ನು ನೇಮಿಸಲಾಗಿದೆ. ಮುಂದಿನ ವಾರ್ಷಿಕ ಸಾಮಾನ್ಯ ಸಭೆಯವರೆಗೂ ವಿನಯ್‌, ಹಣಕಾಸು ಸಮಿತಿಯ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry