ಕೇರಳದಲ್ಲಿ ಕ್ಯಾಥೊಲಿಕ್ ಪಾದ್ರಿಯ ಹತ್ಯೆ ಪ್ರಕರಣ: ಆರೋಪಿ ಜಾನಿ ಬಂಧನ

7

ಕೇರಳದಲ್ಲಿ ಕ್ಯಾಥೊಲಿಕ್ ಪಾದ್ರಿಯ ಹತ್ಯೆ ಪ್ರಕರಣ: ಆರೋಪಿ ಜಾನಿ ಬಂಧನ

Published:
Updated:
ಕೇರಳದಲ್ಲಿ ಕ್ಯಾಥೊಲಿಕ್ ಪಾದ್ರಿಯ ಹತ್ಯೆ ಪ್ರಕರಣ: ಆರೋಪಿ ಜಾನಿ ಬಂಧನ

ಕೊಚ್ಚಿ: ಹಿರಿಯ ಕ್ಯಾಥೊಲಿಕ್ ಪಾದ್ರಿ ಮತ್ತು ಇಲ್ಲಿನ ಪ್ರಮುಖ ಕ್ರಿಶ್ಚಿಯನ್ ಯಾತ್ರಾಸ್ಥಳ ಮಲಯತ್ತೂರ್‌ನ ಮೇಲ್ವಿಚಾರಕ ಗ್ಸೇವಿಯರ್ ಥೇಲಕ್ಕಾಟ್ (52) ಅವರ ಹತ್ಯೆ ಪ್ರಕರಣ ಸಂಬಂಧ ಈ ಹಿಂದೆ ಚರ್ಚ್‌ನ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಆರೋಪಿ ಜಾನಿ ಎಂಬ ವ್ಯಕ್ತಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

‘ಗುರುವಾರ ಮಧ್ಯಾಹ್ನ ಗ್ಸೇವಿಯರ್ ಅವರು ಪವಿತ್ರ ಸ್ಥಳ ಕುರಿಸುಮುದೈಗೆ ಹೋಗುತ್ತಿದ್ದಾಗ ಹರಿತವಾದ ಆಯುಧದಿಂದ ಇರಿಯಲಾಗಿದೆ. ಈ ಹಿಂದೆ ಚರ್ಚಿನ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಜಾನಿ ಎಂಬುವವರು ಈ ಕೃತ್ಯ ಮಾಡಿದ್ದಾರೆ. ಮೂರು ತಿಂಗಳುಗಳ ಹಿಂದೆ ಜಾನಿ ಅವರನ್ನು ಕೆಲಸದಿಂದ ತೆಗೆಯಲಾಗಿತ್ತು’ ಎಂದು ಪೊಲೀಸರು ಹೇಳಿದ್ದರು.

ಘಟನೆಯ ನಂತರ ಕಣ್ಮರೆಯಾಗಿರುವ ಜಾನಿಗಾಗಿ ಶೋಧ ನಡೆಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry