ಪಾವಗಡದ ನಿಡಗಲ್‌ನಲ್ಲಿ ಮಹಿಳೆಯರನ್ನು ಬಲವಂತವಾಗಿ ಹೊತ್ತೊಯ್ದು ಅತ್ಯಾಚಾರ‘: ನಾಗಲಕ್ಷ್ಮಿ ಬಾಯಿ

7

ಪಾವಗಡದ ನಿಡಗಲ್‌ನಲ್ಲಿ ಮಹಿಳೆಯರನ್ನು ಬಲವಂತವಾಗಿ ಹೊತ್ತೊಯ್ದು ಅತ್ಯಾಚಾರ‘: ನಾಗಲಕ್ಷ್ಮಿ ಬಾಯಿ

Published:
Updated:
ಪಾವಗಡದ ನಿಡಗಲ್‌ನಲ್ಲಿ ಮಹಿಳೆಯರನ್ನು ಬಲವಂತವಾಗಿ ಹೊತ್ತೊಯ್ದು ಅತ್ಯಾಚಾರ‘: ನಾಗಲಕ್ಷ್ಮಿ ಬಾಯಿ

ತುಮಕೂರು: ಪಾವಗಡ ತಾಲ್ಲೂಕಿನ ನಿಡಗಲ್‌ನಲ್ಲಿ ಕೆಲ ಕಿಡಿಗೇಡಿಗಳು ಮಹಿಳೆಯರನ್ನು ಬೆದರಿಸಿ ಬಲವಂತವಾಗಿ ಕರೆದುಕೊಂಡು ಹೋಗಿ ಅವರ ಮೇಲೆ ಅತ್ಯಾಚಾರ ನಡೆಸಿ ನಾಲ್ಕೈದು ದಿನಗಳ ನಂತರ ಮನೆಗಳಿಗೆ ಬಿಡುತ್ತಿದ್ದಾರೆ ಎಂದು ವರದಿಯಾಗಿದೆ.

ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಮಹಿಳೆಯರ ಮೇಲೆ ನಿಡಗಲ್ ನಲ್ಲಿ ಅವ್ಯಾಹತವಾಗಿ ದೌರ್ಜನ್ಯ ನಡೆಯುತ್ತಿದೆ. ಈ ಬಗೆ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಿದ್ದೇನೆ. ಗೃಹ ಸಚಿವರಿಗೆ ಪತ್ರ ಬರೆಯುವೆ ಎಂದು ಅವರು ತಿಳಿಸಿದರು.

ಬುಧವಾರ ನಿಡಗಲ್ ಗ್ರಾಮಕ್ಕೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿರುವುದಾಗಿ ನಾಗಲಕ್ಷ್ಮಿ ಬಾಯಿ ತಿಳಿಸಿದರು.

ರಾಮಕೃಷ್ಣ,  ಸುನೀಲ್ ಹಾಗೂ ಅವರ ತಾಯಿ ಈ ಕೆಲಸ ಮಾಡುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ದೌರ್ಜನ್ಯ ನಡೆಸಿದವರು ಊರು ಬಿಟ್ಟಿದ್ದಾರೆ ಎಂದು ನಾಗಲಕ್ಷ್ಮಿ ಬಾಯಿ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry