ಅನುಷ್ಕಾ ಶರ್ಮ ಅಭಿನಯದ 'ಪರಿ' ಸಿನಿಮಾಕ್ಕೆ ನಿಷೇಧ ಹೇರಿದ ಪಾಕಿಸ್ತಾನ

7

ಅನುಷ್ಕಾ ಶರ್ಮ ಅಭಿನಯದ 'ಪರಿ' ಸಿನಿಮಾಕ್ಕೆ ನಿಷೇಧ ಹೇರಿದ ಪಾಕಿಸ್ತಾನ

Published:
Updated:
ಅನುಷ್ಕಾ ಶರ್ಮ ಅಭಿನಯದ 'ಪರಿ' ಸಿನಿಮಾಕ್ಕೆ ನಿಷೇಧ ಹೇರಿದ ಪಾಕಿಸ್ತಾನ

ನವದೆಹಲಿ: ಬಾಲಿವುಡ್ ನಟಿ ಅನುಷ್ಕಾ ಶರ್ಮ ಅಭಿನಯದ ‘ಪರಿ’ ಸಿನಿಮಾ ಪಾಕಿಸ್ತಾನದಲ್ಲಿ ನಿಷೇಧಕ್ಕೊಳಗಾಗಿದೆ.

ಸಿನಿಮಾವು ಮಾಟ–ಮಂತ್ರ, ಮುಸ್ಲೀಮೇತರ ಮೌಲ್ಯಗಳು, ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ಒಳಗೊಂಡಿದೆ ಎಂದು ನಿಷೇಧಿಸಲಾಗಿದೆ ಎಂದು ಪಾಕಿಸ್ತಾನ ಸೆನ್ಸಾರ್ ಮಂಡಳಿ ಹೇಳಿದೆ.

ಸಿನಿಮಾದಲ್ಲಿ ಕುರಾನಿನ ಅಂಶಗಳ ಜತೆಗೆ ಹಿಂದೂ ಮಂತ್ರಗಳನ್ನು ಸೇರಿಸಿದ್ದಾರೆ. ಅಲ್ಲದೇ ಮುಸ್ಲಿಮರು ಮಾಟ–ಮಂತ್ರಗಳನ್ನು ಮಾಡಲು ಕುರಾನಿನ ಅಂಶಗಳನ್ನು ಬಳಸಿಕೊಳ್ಳುತ್ತಾರೆ ಎಂದು ಮುಸ್ಲಿಮರ ಬಗ್ಗೆ ನಕಾರಾತ್ಮಕ ಅಂಶಗಳನ್ನು ಬಿಂಬಿಸಲಾಗಿದೆ ಎಂದು ಪಾಕಿಸ್ತಾನ ಸೆನ್ಸಾರ್ ಮಂಡಳಿಯ ಮೂಲಗಳು ತಿಳಿಸಿವೆ.

ಪರಿ ಸಿನಿಮಾದ ಕಥೆ, ಚಿತ್ರಕಥೆ, ಸಂಭಾಷಣೆಗಳು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿವೆ. ಇದರಲ್ಲಿನ ಅಂಶಗಳು ನೋಡುಗರನ್ನು ಮಾಟ–ಮಂತ್ರ ಹಾಗೂ ಮೂಢನಂಬಿಕೆಗಳ ಕಡೆಗೆ ಪ್ರಚೋದಿಸುತ್ತದೆ. ಅಲ್ಲದೆ ನಮ್ಮ ಧರ್ಮದ ಬಗ್ಗೆ ವಿರೋಧಿ ಭಾವನೆ ತಳೆಯುವಂತೆ ಮಾಡುತ್ತದೆ ಎಂದು ಸೆನ್ಸಾರ್ ಮಂಡಳಿಯ ಹಿರಿಯ ಸದಸ್ಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಸೆನ್ಸಾರ್ ಮಂಡಳಿಯ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ ಚಲನಚಿತ್ರ ವಿತರಕ ಸಂಘದ ಅಧ್ಯಕ್ಷ ಚೌಧರಿ ಇಜಾಜ್ ಕಮ್ರಾ ಅವರು, ಇಸ್ಲಾಂ ಸಂಸ್ಕೃತಿ ಹಾಗೂ ಇತಿಹಾಸಕ್ಕೆ ಧಕ್ಕೆ ತರುವ ಸಿನಿಮಾಗಳ ಪ್ರದರ್ಶನಕ್ಕೆ ಪಾಕಿಸ್ತಾನದಲ್ಲಿ ನಿಷೇಧ ಹೇರಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ...

ಹೆಂಡತಿಯ ಈ ‘ಪರಿ’ ನೋಡಿಲ್ಲ: ಕೊಹ್ಲಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry