ಹೋಳಿ ಆಚರಿಸದ ಕರಣ್‌

ಮಂಗಳವಾರ, ಮಾರ್ಚ್ 26, 2019
27 °C

ಹೋಳಿ ಆಚರಿಸದ ಕರಣ್‌

Published:
Updated:
ಹೋಳಿ ಆಚರಿಸದ ಕರಣ್‌

ಪ್ರತಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಕರಣ್ ಜೋಹರ್‌ ಹೋಳಿಯನ್ನು ಮಾತ್ರ ಆಚರಿಸುವುದಿಲ್ಲ. ಹೋಳಿ ಇಷ್ಟವಾಗುವುದಿಲ್ಲವಂತೆ. ಅದಕ್ಕೆ ಕಾರಣ ಅಭಿಷೇಕ್ ಬಚ್ಚನ್ ಎನ್ನುವುದು ಅವರ ವಿವರಣೆ.

ಬಿಗ್‌ಬಿ ಮನೆಯಲ್ಲಿ ಪ್ರತಿವರ್ಷ ಹೋಳಿ ಸಂಭ್ರಮ ಜೋರಾಗಿಯೇ ಇರುತ್ತದೆ. ಅಂತೆಯೇ ಕರಣ್‌ ಬಾಲ್ಯದಲ್ಲಿ ಅಮಿತಾಬ್‌ ಮನೆಗೆ ಹೋಳಿ ಸಂಭ್ರಮಾಚರಣೆಗೆ ತೆರಳಿದ್ದರಂತೆ.

‘ನನಗೆ ಬಣ್ಣಗಳೊಂದಿಗೆ ಆಡಲು ಇಷ್ಟವಿಲ್ಲ’ ಎಂದು ಕರಣ್‌ ಹೇಳಿ ಮುಗಿಸುವುದರೊಳಗೆ ಅಭಿಷೇಕ್ ಬಚ್ಚನ್‌ ಕರಣ್‌ ಅವರನ್ನು ಕೊಳಕ್ಕೆ ತಳ್ಳಿದ್ದರಂತೆ. ಆನಂತರ ಎಂದಿಗೂ ಹೋಳಿ ಆಡುವ ಧೈರ್ಯವನ್ನು ಕರಣ್ ತೋರಿಲ್ಲ.

ಬಾಲಿವುಡ್‌ ಮಟ್ಟಿಗೆ ಆರ್‌.ಕೆ.ಸ್ಟುಡಿಯೊ ಹಾಗೂ ಅಮಿತಾಬ್‌ ಮನೆಯ ಹೋಳಿ ಆಚರಣೆಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಬಾಲಿವುಡ್‌ ಸೆಲೆಬ್ರಿಟಿಗಳು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರ ದಂಡೇ ಇಲ್ಲಿ ಸೇರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry