‘ಗಂಟಲು ಕಟ್ಟಿಕೊಂಡಾಗ ಹಾಸ್ಯದತ್ತ ಮನಸು ಹರಿಯಿತು’

7

‘ಗಂಟಲು ಕಟ್ಟಿಕೊಂಡಾಗ ಹಾಸ್ಯದತ್ತ ಮನಸು ಹರಿಯಿತು’

Published:
Updated:
‘ಗಂಟಲು ಕಟ್ಟಿಕೊಂಡಾಗ ಹಾಸ್ಯದತ್ತ ಮನಸು ಹರಿಯಿತು’

ಅರೆಕಾಲಿಕ ಸಾಫ್ಟ್‌ವೇರ್ ಎಂಜಿನಿಯರ್ ಹಾಗೂ ಗೃಹಿಣಿಯಾಗಿರುವ ನಾನು ಸ್ಟ್ಯಾಂಡ್‍ಅಪ್ ಕಾಮಿಡಿಯನ್ ಆಗಿದ್ದು ಮಾತ್ರ ಆಕಸ್ಮಿಕ. ಒಂದೂವರೆ ವರ್ಷದ ಹಿಂದೆ ಗಂಟಲಿನ ಸ್ವರ ಪೆಟ್ಟಿಗೆ ಸಮಸ್ಯೆಯಿಂದಾಗಿ ನನ್ನ ಧ್ವನಿ ಸಂಪೂರ್ಣವಾಗಿ ನಿಂತಿತ್ತು. ಕೆಲ ಸಮಯ ನಾನು ಮಾತನಾಡುವಂತಿರಲಿಲ್ಲ. ಆಗ ಯೂಟ್ಯೂಬ್‍ನಲ್ಲಿ ಸ್ಟ್ಯಾಂಡ್‍ಅಪ್ ಕಾಮಿಡಿಗಳನ್ನು ನೋಡುತ್ತಿದ್ದೆ. ನನಗೂ ಅದರಲ್ಲಿ ಪಾಲ್ಗೊಳ್ಳುವ ಮನಸ್ಸಾಯಿತು. ಇದೇ ನನ್ನನ್ನು ಇಂದು ಸ್ಟ್ಯಾಂಡ್‍ಅಪ್ ಕಾಮಿಡಿಯನ್ ಆಗಿ ಜನರನ್ನು ನನ್ನ ಹಾಸ್ಯಗಳ ಮೂಲಕ ನಗಿಸುವಂತೆ ಮಾಡಿತು.

ಇಂತಹ ಹಾಸ್ಯ ಕಾರ್ಯಕ್ರಮಗಳು ಆರಂಭವಾಗುತ್ತಿದ್ದದ್ದು ರಾತ್ರಿ 8 ಗಂಟೆ ಸುಮಾರಿಗೆ. ಕೋರಮಂಗಲ, ಇಂದಿರಾನಗರಗಳಲ್ಲಿರುವ ಓಪನ್ ಮೈಕ್ ವೇದಿಕೆಯಲ್ಲಿ. ನಾನಿದ್ದದ್ದು ಜೆ.ಪಿ. ನಗರದಲ್ಲಿ. ಮಗಳನ್ನು ಸಲಹುತ್ತಾ ಈ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುವುದು ಮೊದಮೊದಲು ಕಷ್ಟವಾಗಿತ್ತು. ಆದರೆ ಮನೆಯವರ ಬೆಂಬಲದಿಂದ ಹಾಸ್ಯದತ್ತ ಗಮನ ಹರಿಸಲು ಸಾಧ್ಯವಾಗಿದೆ.

ನನಗೆ ಈಗ 35 ವರ್ಷ. ಓಪನ್ ಮೈಕ್ ಪ್ರದರ್ಶನ ಕೊಡಲು ಬರುತ್ತಿದ್ದವರು ವಯಸ್ಸಿನಲ್ಲಿ ನನಗಿಂತ ಚಿಕ್ಕವರು. ನಾನು ಮೊದಲ ಬಾರಿಗೆ ಅಲ್ಲಿಗೆ ಹೋದಾಗ ನನ್ನನ್ನು ಪ್ರೇಕ್ಷಕಿ ಅಂದುಕೊಂಡಿದ್ದರು.

ನಾನು ನನ್ನ ಸ್ನೇಹಿತರ ಮುಂದೆ ಸಾಕಷ್ಟು ಬಾರಿ ಹಾಸ್ಯಗಳನ್ನ ಹೇಳಿ ಈ ಓಪನ್ ಮೈಕ್ ಕಾರ್ಯಕ್ರಮಕ್ಕೆ ತಯಾರಿ ನಡೆಸಿದ್ದೆ. ಹಾಗಾಗಿ ಧೈರ್ಯವಾಗಿ ಈ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದೆ. ನನಗೆ ಜೊತೆಯಾಗಿದ್ದು ಲೊಲ್‍ಬಾಗ್ ತಂಡ. ಕನ್ನಡದಲ್ಲಿ ಸ್ಟ್ಯಾಂಡ್‍ಅಪ್ ಕಾಡಿಮಿಯನ್ನರ ಸಂಖ್ಯೆ ಕಡಿಮೆ ಇದ್ದ ಸಮಯದಲ್ಲಿ ಹುಟ್ಟಿಕೊಂಡ ತಂಡವಿದು.

ನಾವು ಯಾವ ವಿಷಯವನ್ನಾದರೂ ಹಾಸ್ಯವನ್ನಾಗಿ ಹೇಳಬಹುದು. ಹಲವಾರು ಬಾರಿ ಲೈಂಗಿಕ ವಿಷಯಗಳು ಹಾಸ್ಯದ ವಸ್ತುವಾಗಿರುತ್ತವೆ. ಆದರೆ ಅದನ್ನಾಧರಿಸಿ ನಮ್ಮ ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲ. ಟ್ರಂಪ್, ಮೋದಿ ಹೀಗೆ ರಾಜಕೀಯ ವ್ಯಕ್ತಿಗಳ ವಿಷಯವನ್ನಾಧರಿಸಿ ಹಾಸ್ಯ ಮಾಡಲಾಗುತ್ತದೆ. ಇದು ಒಂದು ರೀತಿಯಲ್ಲಿ ವಿಡಂಬನಾತ್ಮಕ ಹಾಸ್ಯ.

ಕೆಲ ಕಾರ್ಯಕ್ರಮಗಳನ್ನು ಕೊಟ್ಟ ನಂತರ ಇಂಗ್ಲಿಷ್‌ನಲ್ಲಿ ಹಾಸ್ಯ ಕಾರ್ಯಕ್ರಮಗಳನ್ನು ಮಾಡುವ ಸ್ಟ್ಯಾಂಡ್‍ಅಪ್ ಕಾಮಿಡಿಯನ್ನರು ಪರಿಚಯವಾದರು. ಈಗ ನಾವೆಲ್ಲರೂ ಒಟ್ಟಿಗೆ ಸೇರಿ ಕಾರ್ಯಕ್ರಮಗಳನ್ನು ಕೊಡುತ್ತಿದ್ದೇವೆ. ನಮ್ಮ ತಂಡದಲ್ಲಿ ಐದು ಜನರಿದ್ದೇವೆ. ಈಚೆಗಷ್ಟೇ ಗರ್ಭಕೋಶ ಮತ್ತು ನಾನು ಎಂಬ ಪರಿಕಲ್ಪನೆಯಲ್ಲಿ ಸ್ಟ್ಯಾಂಡ್‍ಆಪ್ ಕಾಮಿಡಿ ಶೋ ನಡೆಸಿದೆವು. ಮಹಿಳೆಯರು ಗರ್ಭಕೋಶದ ಬಗ್ಗೆ ಮಾತನಾಡುವುದಿಲ್ಲ. ಈ ಕುರಿತು ಧೈರ್ಯವಾಗಿ ಮಾತನಾಡುವ ಹೊಸ ಪರಿಕಲ್ಪನೆಯೊಂದಿಗೆ ನಾವು ಜನರ ಮುಂದೆ ಬಂದು ನಿಂತೆವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry