ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುಷಿ, ಖುಷಿಯಾಗಿರಿ

Last Updated 2 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಖುಷಿಯಾಗಿರುವುದು ಹೇಗೆ? ಇದೊಂದು ಯಕ್ಷ ಪ್ರಶ್ನೆ. ಇದಕ್ಕೆ ಉತ್ತರವೂ ನಮ್ಮಲ್ಲಿಯೇ ಇದೆ. ಚಿಕ್ಕ, ಪುಟ್ಟ ಕೆಲಸಗಳನ್ನು ಮಾಡಿ ಜೀವನದಲ್ಲಿ ದೊಡ್ಡ ಖುಷಿ ಅನುಭವಿಸಿ

* ದೈಹಿಕ ಚಟುವಟಿಕೆ: ದೇಹ ಕ್ರಿಯಾಶೀಲವಾದಷ್ಟು ಆರೋಗ್ಯ ಚೆನ್ನಾಗಿರುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸರಳ ಸೂತ್ರಗಳನ್ನು ಪಾಲಿಸುವುದರಿಂದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು. ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ. ಮನೆಯಲ್ಲಿ ಮಕ್ಕಳಿದ್ದರೆ ಅವರೊಂದಿಗೆ ವಾಕಿಂಗ್‌ ಹೋಗಿ. ಹಿಮ್ಮುಖವಾಗಿ ನಡೆದರೆ ಮಿದುಳು ಚುರುಕಾಗುತ್ತದೆ. ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸು ಉಲ್ಲಾಸವಾಗಿರುತ್ತದೆ.

* ಸ್ನೇಹಿತರೊಂದಿಗೆ ಕಾಲ ಕಳೆಯಿರಿ: ಮನಸಿಗೆ ತುಂಬಾ ನೋವಾದಾಗ ಸ್ನೇಹಿತರಿಗೆ ಕರೆ ಮಾಡಿ ಮಾತನಾಡಿ. ವರ್ಷಕ್ಕೆ ಒಮ್ಮೆಯಾದರೂ ಗೆಳೆಯರ ಗುಂಪಿನಲ್ಲಿ ‘ಗೆಟ್‌ ಟು ಗೆದರ್‌’ ಪಾರ್ಟಿ ಮಾಡಿ. ಹರಟೆ, ನಗುವಿನ ಮಧ್ಯೆ ಕಹಿ ಘಟನೆಗಳು ಕರಗುತ್ತವೆ. ಕೇವಲ ದುಃಖ ಮಾತ್ರವಲ್ಲ. ಸಂತೋಷದ ಕ್ಷಣಗಳನ್ನೂ ಗೆಳೆಯರೊಡನೆ ಹಂಚಿಕೊಳ್ಳಿ.

* ಸಿಹಿ ನೆನಪುಗಳ ಮೆಲುಕು: ಹಳೆಯ ಖುಷಿ ನೆನಪುಗಳು ಶಕ್ತಿಶಾಲಿ ‘ಮೂಡ್ ಮೂಸ್ಟರ್‌’ಗಳೂ ಹೌದು. ವರ್ತಮಾನ ಮತ್ತು ಭವಿಷ್ಯದ ಬಗ್ಗೆ ನಾವೆಲ್ಲರೂ ಸದಾ ಯೋಚಿಸುತ್ತಿರುತ್ತೇವೆ. ಹಳೆಯ ಕೆಟ್ಟ ನೆನಪುಗಳನ್ನು ಜೊತೆಗಿಟ್ಟುಕೊಂಡು ಸಾಗುತ್ತೇವೆ. ಕಳೆದ ಮಧುರ ಕ್ಷಣಗಳನ್ನು ನೆನಪಿಸಿಕೊಳ್ಳುವುದೇ ಇಲ್ಲ. ಮಧುರ ಕ್ಷಣಗಳನ್ನು ಮೆಲುಕು ಹಾಕುವುದರಿಂದ ಮನಸು ಉಲ್ಲಾಸಿತವಾಗುತ್ತದೆ. ಹಳೆಯ ಫೋಟೊ, ನೀವೇ ಗೀಚಿದ ಅಕ್ಷರಗಳು, ಬಾಲ್ಯದ ನೆನಪುಗಳಿಗೆ ಜಾರಿ ನೋಡಿ ಬದುಕು ಎಷ್ಟು ಸುಂದರ ಅನಿಸುವುದೇ ಇರದು.

* ಹಾಸ್ಯಕ್ಕಾಗಿ ಸಮಯ ನೀಡಿ: ಹಾಸ್ಯದ ವಿಡಿಯೊಗಳನ್ನು ನೋಡಿ. ಹಾಸ್ಯಕ್ಕೆ ಹಲವು ನೋವುಗಳನ್ನು ಮರೆಸುವ ಶಕ್ತಿಯಿದೆ. ಮಕ್ಕಳ ಹಲವು ವಿಡಿಯೊಗಳು ಅಂತರ್ಜಾಲದಲ್ಲಿ ಸಿಗುತ್ತವೆ. ಹಾಗಂತ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹೊತ್ತು ಕಾಲ ಕಳೆದರೂ, ಖಿನ್ನತೆ ಹೆಚ್ಚಾಗಬಹುದು. ನಿಗದಿತ ಸಮಯವನ್ನು ಇದಕ್ಕಾಗಿ ಮೀಸಲಿರಿಸಿ.

* ಒಳ್ಳೆಯ ಕೆಲಸ ಮಾಡಿ: ನೀವು ಮಾಡುವ ಒಳ್ಳೆಯ ಕೆಲಸಗಳು ಖುಷಿ ನೀಡುವುದರ ಜೊತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅದು ದೊಡ್ಡಮಟ್ಟದ್ದೇ ಆಗಬೇಕೆಂದೇನು ಇಲ್ಲ. ವಯಸ್ಸಾದವರು, ಅಂಧರನ್ನು ರಸ್ತೆ ದಾಟಿಸುವುದು, ಕಷ್ಟದಲ್ಲಿರುವವರಿಗೆ ಒಂದು ಹೊತ್ತಿನ ಊಟ ಕೊಡುವುದು... ಇಂತಹ ಚಿಕ್ಕಪುಟ್ಟ ಕೆಲಸ ಮಾಡಿ, ಅದರಿಂದ ಸಿಗುವ ಖುಷಿ ಅನುಭವಿಸಿ.

* ಪ್ರಕೃತಿ ಸೌಂದರ್ಯ ಅನುಭವಿಸಿ: ನಗರದ ಮಂದಿ ದಿನಪೂರ್ತಿ ಕಂಪ್ಯೂಟರ್‌, ಟ್ರಾಫಿಕ್‌ ಎಂದೇ ಕಳೆದುಹೋಗುತ್ತಾರೆ. ಹಳ್ಳಿಗಳಲ್ಲಿರುವ ಇರುವ ಅನೇಕರು ‘ನಮ್ಮೂರಿನಲ್ಲೇನಿದೆ’ ಎಂದು ನಗರಗಳಿಗೆ ಬರುತ್ತಾರೆ. ಆದರೆ, ಪ್ರಕೃತಿಯ ಜೊತೆ ಬೆರೆತು ಆ ಖುಷಿ ಅನುಭವಿಸಿ. ಅವಕಾಶ ಸಿಕ್ಕಾಗ ಚಾರಣ ಹೋಗಿ. ತಿಂಗಳಿಗೊಮ್ಮೆಯಾದರೂ ಕುಟುಂಬ ಸಹಿತ ಸಮೀಪದ ಸ್ಥಳಗಳಿಗೆ ಪಿಕ್‌ನಿಕ್‌ ಹೋಗಿ. ಮನಸು ಗೆಲುವಾಗದಿದ್ದರೆ ಕೇಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT