ನಿಪ್ಪೊನ್‌ ಸ್ಟೀಲ್‌ ಜತೆ ಒಪ್ಪಂದ

7

ನಿಪ್ಪೊನ್‌ ಸ್ಟೀಲ್‌ ಜತೆ ಒಪ್ಪಂದ

Published:
Updated:
ನಿಪ್ಪೊನ್‌ ಸ್ಟೀಲ್‌ ಜತೆ ಒಪ್ಪಂದ

ನವದೆಹಲಿ: ಎಸ್ಸಾರ್‌ ಸ್ಟೀಲ್‌ ಅನ್ನು ಜಂಟಿಯಾಗಿ ಸ್ವಾಧೀನಪಡಿಸಿಕೊಳ್ಳುವ ಉದ್ದೇಶಕ್ಕೆ ಅರ್ಸೆಲರ್‌ ಮಿತ್ತಲ್‌ ಸಂಸ್ಥೆಯು ನಿಪ್ಪೊನ್‌ ಸ್ಟೀಲ್‌ ಆ್ಯಂಡ್‌ ಸುಮಿಟೊಮೊ ಮೆಟಲ್‌ ಕಾರ್ಪೊರೇಷನ್‌ (ಎನ್‌ಎಸ್‌ಎಸ್‌ಎಂಸಿ) ಜತೆ ಒಪ್ಪಂದ ಮಾಡಿಕೊಂಡಿದೆ.

ಬ್ಯಾಂಕ್‌ಗಳಿಗೆ ಸಾಲ ವಸೂಲಾತಿ ಮಾಡದ ಕಾರಣಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌, ದಿವಾಳಿ ಸಂಹಿತೆಯಡಿ 12 ಉದ್ದಿಮೆಗಳ ವಿರುದ್ಧ ಕ್ರಮ ಕೈಗೊಂಡಿದೆ. ಅದರಲ್ಲಿ ಎಸ್ಸಾರ್‌ ಸ್ಟೀಲ್‌ ಕೂಡ ಒಂದಾಗಿದೆ. ಅರ್ಸೆಲರ್‌ ಮಿತ್ತಲ್‌ ಮತ್ತು ಎನ್‌ಎಸ್‌ಎಸ್‌ಎಂಸಿ ಜಂಟಿಯಾಗಿ ಎಸ್ಸಾರ್‌ ಸ್ಟೀಲ್‌ ಸ್ವಾಧೀನಪಡಿಸಿಕೊಂಡು ನಿರ್ವಹಿಸಲು ಮುಂದಾಗಿವೆ.

‘ಎರಡೂ ಸಂಸ್ಥೆಗಳ ತಂತ್ರಜ್ಞಾನದ ನೆರವಿನಿಂದ ಎಸ್ಸಾರ್‌ ಸ್ಟೀಲ್‌ ಚೇತರಿಕೆಯ ಹಾದಿಗೆ ಮರಳಲಿದೆ. ಅದರ ಉತ್ಪಾದನಾ’ ಎಂದು ಅರ್ಸೆಲರಮಿತ್ತಲ್‌ನ ಅಧ್ಯಕ್ಷ ಲಕ್ಷ್ಮಿ ಮಿತ್ತಲ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry