84 ಶಂಕಿತ ರಕ್ತಚಂದನ ಕಳ್ಳಸಾಗಣೆದಾರರ ಬಂಧನ

7

84 ಶಂಕಿತ ರಕ್ತಚಂದನ ಕಳ್ಳಸಾಗಣೆದಾರರ ಬಂಧನ

Published:
Updated:

ತಿರುಪತಿ : ತಮಿಳುನಾಡು ಮೂಲದ 84 ಶಂಕಿತ ರಕ್ತಚಂದನ ಕಳ್ಳಸಾಗಣೆದಾರರನ್ನು ಆಂಧ್ರಪ್ರದೇಶ ಪೊಲೀಸರು ಶುಕ್ರವಾರ ಇಲ್ಲಿನ ಆಂಜನೇಯಪುರಂನಲ್ಲಿ ಬಂಧಿಸಿದ್ದಾರೆ.

‘ಆರೋಪಿಗಳು ತಮಿಳುನಾಡಿನ ಅರ್ಕೊಟ್‌ನಿಂದ ಆಂಧ್ರದ ಶೇಷಾಚಲಂ ಬೆಟ್ಟ ಪ್ರದೇಶದ ಕಾಡಿಗೆ ಲಾರಿಯಲ್ಲಿ ಹೊರಟಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿತ್ತು. ಆಗ ಅವರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರಲ್ಲಿ ಮೂವರು ಕಾಲೇಜು ವಿದ್ಯಾರ್ಥಿಗಳು’ ಎಂದು ‘ರಕ್ತಚಂದನ ಕಳ್ಳಸಾಗಣೆ ನಿಗ್ರಹ ದಳದ’ ಮೂಲಗಳು ತಿಳಿಸಿವೆ.

ಪೊಲೀಸರು ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ.

ತಮಿಳುನಾಡಿನ 500ಕ್ಕೂ ಹೆಚ್ಚು ಮರ ಕಳ್ಳಸಾಗಣೆದಾರರನ್ನು ಆಂಧ್ರ ಪೊಲೀಸರು ಕಾನೂನುಬಾಹಿರವಾಗಿ ವಶಕ್ಕೆ ಪಡೆದಿದ್ದಾರೆ. ಹಾಗಾಗಿ ತಪ್ಪಿತಸ್ಥ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆರೋಪಿಸಿ ಪಿ. ಪುಗಲೆಂತಿ ಎಂಬ ವಕೀಲರು ಮದ್ರಾಸ್‌ ಹೈಕೋರ್ಟ್‌ನಲ್ಲಿ ಬುಧವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ತಮಿಳುನಾಡು ಸರ್ಕಾರದ ಗಮನಕ್ಕೂ ತರದೇ ಇವರನ್ನು ಬಂಧಿಸಲಾಗಿದೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry