ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ: ಹೆಚ್ಚುತ್ತಿದೆ ರಾಜ್ಯದ ಪಾಲು

ಕೇಂದ್ರ ಆಹಾರ ಮತ್ತು ನಾಗರಿಕ ವ್ಯವಹಾರಗಳ ಸಚಿವಾಲಯ ವರದಿ
Last Updated 2 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ:‘ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನುಷ್ಠಾನದ ನಂತರ ಕೇಂದ್ರದಿಂದ ಕರ್ನಾಟಕಕ್ಕೆ ನೀಡಲಾಗುತ್ತಿರುವ ಆಹಾರ ಧಾನ್ಯದ ಪ್ರಮಾಣದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 2017–18ನೇ ಆರ್ಥಿಕ ವರ್ಷದಲ್ಲಿ ಜನವರಿ 18ರವರೆಗೆ ಕೇಂದ್ರ ಸರ್ಕಾರವು ರಾಜ್ಯಕ್ಕೆ 23.92 ಲಕ್ಷ ಟನ್‌ನಷ್ಟು ಆಹಾರ ಧಾನ್ಯ ಒದಗಿಸಿದೆ’ ಎಂಬ ಮಾಹಿತಿ ಕೇಂದ್ರ ಆಹಾರ ಮತ್ತು ನಾಗರಿಕ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯಲ್ಲಿ ಇದೆ.

ಆಹಾರ ಸಚಿವಾಲಯ ಹೇಳಿದ್ದು

* ಕರ್ನಾಟಕ ಸರ್ಕಾರದ ಮನವಿಯನ್ನು ಆಧರಿಸಿ 2017–18ನೇ ಸಾಲಿನಲ್ಲಿ ರಾಜ್ಯಕ್ಕೆ ಅಕ್ಕಿ ಮಾತ್ರ ಪೂರೈಸಲಾಗಿದೆ

* ರಾಜ್ಯ ಸರ್ಕಾರವು ಸ್ಥಳೀಯವಾಗೇ ಅಕ್ಕಿಯನ್ನು ಖರೀದಿಸಿ, ಸರಬರಾಜು ಮಾಡುತ್ತಿದೆ. ಅಕ್ಕಿಯ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುತ್ತಿದೆ

* ಈ ಯೋಜನೆ ಅಡಿ ರಾಗಿಯನ್ನು ಖರೀದಿಸಿ, ನಾಗರಿಕರಿಗೆ ಪೂರೈಸಲು ಅನುಮತಿ ನೀಡುವಂತೆ ಕರ್ನಾಟಕ ಸರ್ಕಾರ ಮನವಿ ಸಲ್ಲಿಸಿದೆ. ಅದನ್ನು ಪರೀಶೀಲಿಸಲಾಗುತ್ತಿದೆ

* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿನಿಲಯಗಳು, ವೃದ್ಧಾಶ್ರಮಗಳು ಮತ್ತು ನಿರಾಶ್ರಿತರ ಶಿಬಿರಗಳಿಗೆ ಪೂರೈಸಲು ಕರ್ನಾಟಕಕ್ಕೆ ಪ್ರತ್ಯೇಕವಾಗಿ 65,713 ಟನ್ ನೀಡಲಾಗುತ್ತಿದೆ

24.56 ಲಕ್ಷ ಟನ್ -2013–14

25.42 ಲಕ್ಷ ಟನ್ -2014–15

26.08 ಲಕ್ಷ ಟನ್ -2015–16

26.08 ಲಕ್ಷ ಟನ್ -2016–17

23.92 ಲಕ್ಷ ಟನ್ -2017–18 (ಜನವರಿ 18, 2018ರವರೆಗೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT