ರಾಸಾಯನಿಕ ಶಸ್ತ್ರಾಸ್ತ್ರಗಳ ದಾಳಿ ಸಹಿಸಲಾಗದು: ಅಮೆರಿಕ, ಫ್ರಾನ್ಸ್‌

ಗುರುವಾರ , ಮಾರ್ಚ್ 21, 2019
33 °C
ಡೊನಾಲ್ಡ್‌ ಟ್ರಂಪ್, ಮೇಕ್ರನ್ ಮಾತುಕತೆ

ರಾಸಾಯನಿಕ ಶಸ್ತ್ರಾಸ್ತ್ರಗಳ ದಾಳಿ ಸಹಿಸಲಾಗದು: ಅಮೆರಿಕ, ಫ್ರಾನ್ಸ್‌

Published:
Updated:
ರಾಸಾಯನಿಕ ಶಸ್ತ್ರಾಸ್ತ್ರಗಳ ದಾಳಿ ಸಹಿಸಲಾಗದು: ಅಮೆರಿಕ, ಫ್ರಾನ್ಸ್‌

ಪ್ಯಾರಿಸ್‌: ಸಿರಿಯಾದಲ್ಲಿ ಇನ್ನಷ್ಟು ರಾಸಾಯನಿಕ ಅಸ್ತ್ರಗಳನ್ನು ಬಳಸಿ ದಾಳಿ ಮಾಡುವುದನ್ನು ಸಹಿಸಲಾಗುವುದಿಲ್ಲ ಎಂದು ಫ್ರಾನ್ಸ್‌ ಅಧ್ಯಕ್ಷ ಎಮ್ಯಾನ್ಯುಯೆಲ್‌ ಮೇಕ್ರನ್‌ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

ಈ ಇಬ್ಬರೂ ನಾಯಕರು ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ ಈ ಕುರಿತು ಚರ್ಚಿಸಿದ್ದಾರೆ. ಡಮಾಸ್ಕಸ್‌ ದೇಶವು ವಿಶ್ವಸಂಸ್ಥೆಯ ಕದನವಿರಾಮ ಉಲ್ಲಂಘಿಸದಂತೆ ಅದರ ಮೇಲೆ ರಷ್ಯಾ ಒತ್ತಡ ಹೇರಬೇಕು ಎಂದು ಇಬ್ಬರೂ ಆಗ್ರಹಿಸಿದ್ದಾರೆ.

‘ಇನ್ನು ಮುಂದೆ ಯಾರಾದರೂ ಸಿರಿಯಾದಲ್ಲಿ ರಾಸಾಯನಿಕ ಶಸ್ತ್ರಾಸ್ತ್ರಗಳಿಂದ ದಾಳಿ ಎಸಗಿ, ನಾಗರಿಕರ ಸಾವಿಗೆ ಕಾರಣವಾದರೆ ಅಮೆರಿಕದ ಸಹಕಾರದೊಂದಿಗೆ ಫ್ರಾನ್ಸ್‌ ದೃಢವಾಗಿ ಪ್ರತಿಕ್ರಿಯಿಸುತ್ತದೆ’ ಎಂದು ಫ್ರಾನ್ಸ್‌ ಅಧ್ಯಕ್ಷರ ಕಚೇರಿ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry