ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಟಾರ್ಕ್ಟಿಕಾದಲ್ಲಿ ಕುಗ್ಗಿದ ಮಂಜುಗಡ್ಡೆ

Last Updated 2 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಸಿಡ್ನಿ: ಅಂಟಾರ್ಕ್ಟಿಕಾದಲ್ಲಿ ಸಮುದ್ರದಲ್ಲಿ ತೇಲುವ ಮಂಜುಗಡ್ಡೆ ಸತತ ಎರಡನೇ ವರ್ಷವೂ ಕುಗ್ಗಿದೆ. ಆದರೆ, ಇದಕ್ಕೆ ಖಚಿತವಾದ ಕಾರಣಗಳು ತಿಳಿದು ಬಂದಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಆರ್ಕ್ಟಿಕ್‌ ಪ್ರದೇಶದಲ್ಲಿ ಮಾತ್ರ ಹೆಚ್ಚಿನ ತಾಪಮಾನ ದಾಖಲಾಗಿದೆ ಎಂದು ಕಳೆದ ವಾರ ಮಾಹಿತಿ ನೀಡಿದ್ದರು.

ಮಂಜುಗಡ್ಡೆ ಸುತ್ತ ಆವರಿಸಿಕೊಂಡಿರುವ ಪ್ರದೇಶವು ಬೇಸಿಗೆ ಕಾಲದಲ್ಲಿ 21.5 ಲಕ್ಷ ಚದರ ಕಿಲೋಮೀಟರ್‌ ವಿಸ್ತರಿಸಿದೆ ಎಂದು ಆಸ್ಟ್ರೇಲಿಯಾದ ಅಂಟಾರ್ಕ್ಟಿಕಾ ವಿಭಾಗದ ಉಪಗ್ರಹ ಇತ್ತೀಚೆಗೆ ಮಾಹಿತಿ ರವಾನಿಸಿತ್ತು. ಕಳೆದ ವರ್ಷ ಮಾರ್ಚ್‌ನಲ್ಲಿ 20.07 ಚದರ ಕಿಲೋಮೀಟರ್‌ನಷ್ಟು ಈ ಪ್ರದೇಶ ಹೊಂದಿತ್ತು. ಆದರೆ, ಚಳಿಗಾಲದಲ್ಲಿ ಇದು ದಿಢೀರನೇ ಹೆಚ್ಚಾಗಿ 180 ಲಕ್ಷ ಚದರ ಕಿಲೋ ಮೀಟರ್‌ನಷ್ಟು ಆವರಿಸಿಕೊಂಡಿತ್ತು ಎನ್ನುವ ಮಾಹಿತಿ ದೊರೆತಿತ್ತು.

‘2016ರ ಆಗಸ್ಟ್‌ನಿಂದ ಸಮುದ್ರದ ಮಂಜುಗಡ್ಡೆ ಆವರಿಸಿಕೊಂಡಿರುವ ಪ್ರದೇಶದಲ್ಲಿ ಅಪಾರ ಬದಲಾವಣೆಗಳಾಗುತ್ತಿವೆ’ ಎಂದು ಅಂಟಾರ್ಕ್ಟಿಕಾ ಹವಾಮಾನ ವಿಭಾಗದ ವಿಜ್ಞಾನಿ ಫಿಲ್‌ ರೀಡ್‌ ತಿಳಿಸಿದ್ದಾರೆ.

‘ಮಂಜುಗಡ್ಡೆ ಪ್ರದೇಶವು ಕುಗ್ಗುತ್ತಿರುವ ಬಗ್ಗೆ ಖಚಿತವಾದ ಕಾರಣಗಳ ಬಗ್ಗೆ ವಿಶ್ಲೇಷಣೆ ನಡೆಸಲಾಗುತ್ತಿದೆ. ಜಾಗತಿಕ ತಾಪಮಾನ ವ್ಯವಸ್ಥೆಯಲ್ಲಿ ಮಂಜುಗಡ್ಡೆ ಪ್ರದೇಶವು ಮಹತ್ವದ ಪಾತ್ರ ವಹಿಸುತ್ತದೆ. ಜತೆಗೆ ಹಡಗುಗಳ ಸಂಚಾರ ಮತ್ತು ಸರಕುಗಳ ರವಾನೆಗೂ ಮಹತ್ವದ ಮಾಹಿತಿ ಒದಗಿಸುತ್ತದೆ’ ಎಂದು ಆಸ್ಟ್ರೇಲಿಯಾದ ಅಂಟಾರ್ಕ್ಟಿಕಾ ವಿಭಾಗದ ವಿಜ್ಞಾನಿ ರಾಬ್‌ ಮಾಸ್ಸೊಮ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT