ದಾಖಲೆ ಚಿನ್ನ ಗೆದ್ದ ನವಜೋತ್‌

7

ದಾಖಲೆ ಚಿನ್ನ ಗೆದ್ದ ನವಜೋತ್‌

Published:
Updated:

ಬಿಷ್ಕೆಕ್‌: ನವಜೋತ್ ಕೌರ್‌ ಅವರು ಏಷ್ಯನ್‌ ಸೀನಿಯರ್‌ ಕುಸ್ತಿಯಲ್ಲಿ ಚಿನ್ನ ಗೆದ್ದು ಶುಕ್ರವಾರ ಇತಿಹಾಸ ಬರೆದರು. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ದಾಖಲೆ ಅವರದಾಯಿತು.

65 ಕೆಜಿ ಫ್ರೀಸ್ಟೈಲ್ ವಿಭಾಗದ ಫೈನಲ್‌ ಬೌಟ್‌ನಲ್ಲಿ ಅವರು ಜಪಾನ್‌ನ ಮಿಯಾ ಇಮಾಯ್‌ ಅವರನ್ನು 9–1ರಿಂದ ಮಣಿಸಿದರು. ಈ ಮೂಲಕ ಈ ಬಾರಿಯ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಅವರು ಮೊದಲ ಪದಕ ಗಳಿಸಿಕೊಟ್ಟರು.

ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸಾಕ್ಷಿ ಮಲಿಕ್‌ 62 ಕೆಜಿ ವಿಭಾಗದ ಫ್ರೀ ಸ್ಟೈಲ್‌ನಲ್ಲಿ ಕಜಕಸ್ತಾನದ ಅಯಾಲಿಮ್‌ ಕಸಿಮೊವಾ ಅವರನ್ನು 10–7ರಿಂದ ಸೋಲಿಸಿ ಕಂಚು ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry