ಫೈನಲ್‌ನಲ್ಲಿ ಭಾರತ–ಪಾಕ್ ಮುಖಾಮುಖಿ

7

ಫೈನಲ್‌ನಲ್ಲಿ ಭಾರತ–ಪಾಕ್ ಮುಖಾಮುಖಿ

Published:
Updated:
ಫೈನಲ್‌ನಲ್ಲಿ ಭಾರತ–ಪಾಕ್ ಮುಖಾಮುಖಿ

ದೋಹಾ: ಭಾರತ ತಂಡ ಇಲ್ಲಿ ನಡೆಯುತ್ತಿರುವ ಐಬಿಎಸ್‌ಎಫ್‌ ವಿಶ್ವಕಪ್‌ ಸ್ನೂಕರ್ ತಂಡ ವಿಭಾಗದ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು ಆಡಲಿದೆ.

ಸೆಮಿಫೈನಲ್‌ನಲ್ಲಿ ಪಂಕಜ್ ಅಡ್ವಾಣಿ ಮತ್ತು ಮನನ್‌ ಅವರನ್ನು ಒಳಗೊಂಡ ಭಾರತ ತಂಡ 3–2ರಲ್ಲಿ ಇರಾನ್ ಎದುರು ಜಯಭೇರಿ ದಾಖಲಿಸಿದೆ. ಪಂಕಜ್‌ ಮತ್ತು ಮನನ್‌ ಸಿಂಗಲ್ಸ್ ವಿಭಾಗಗಳ ಪಂದ್ಯದಲ್ಲಿ ಗೆದ್ದರೆ ಡಬಲ್ಸ್‌ನಲ್ಲಿ ಸೋತರು.

ನಿರ್ಣಾಯಕ ಪಂದ್ಯದಲ್ಲಿ ಅಡ್ವಾಣಿ ಅವರು ಅಮೀರ್ ಸರೋಖಿ ಎದುರು ಜಯಗಳಿಸಿದರು. ಪಾಕಿಸ್ತಾನ ತಂಡ ಸೆಮಿಫೈನಲ್‌ನಲ್ಲಿ 3–2ರಲ್ಲಿ ಹಾಂಕಾಂಗ್ ಎದುರು ಗೆದ್ದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry