ಪದಾರ್ಪಣೆಯ ನಿರೀಕ್ಷೆಯಲ್ಲಿ: ಹೂಡಾ

ಮಂಗಳವಾರ, ಮಾರ್ಚ್ 19, 2019
21 °C

ಪದಾರ್ಪಣೆಯ ನಿರೀಕ್ಷೆಯಲ್ಲಿ: ಹೂಡಾ

Published:
Updated:
ಪದಾರ್ಪಣೆಯ ನಿರೀಕ್ಷೆಯಲ್ಲಿ: ಹೂಡಾ

ಮುಂಬೈ: ನಾಯಕ ವಿರಾಟ್ ಕೊಹ್ಲಿ ಮತ್ತು ಕೆಲವು ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿರುವ ಕಾರಣ ಬರೋಡದ ಆಲ್‌ರೌಂಡರ್‌ ದೀಪಕ್ ಹೂಡಾ ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋನ ಟ್ವೆಂಟಿ–20 ಕ್ರಿಕೆಟ್ ಸರಣಿಯ ಪದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ಹೂಡ ಅವರು ಇತ್ತೀಚೆಗೆ ಶ್ರೀಲಂಕಾ ಸರಣಿಗಾಗಿ ಪ್ರಕಟಗೊಂಡ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಡಿಸೆಂಬರ್ ತಿಂಗಳಿನಲ್ಲಿ ತವರಿನಲ್ಲಿ ಶ್ರೀಲಂಕಾ ಎದುರು ನಡೆದಿದ್ದ ಟ್ವೆಂಟಿ–20 ಸರಣಿಯಲ್ಲಿ ಅವರಿಗೆ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿತ್ತು. ಆದರೆ ಆಡುವ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ.

ತ್ರಿಕೋನ ಸರಣಿಯಲ್ಲಿ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ದೋನಿಗೆ ವಿಶ್ರಾಂತಿ ನೀಡಲಾಗಿದೆ. ಮಾರ್ಚ್‌ 6ರಿಂದ ಪ್ರೇಮದಾಸ ಕ್ರೀಡಾಂಗಣದಲ್ಲಿ ಪಂದ್ಯಗಳು ಆರಂಭವಾಗಲಿವೆ.

‘ಹಿಂದಿನ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ನನಗೆ ಆಡಲು ಅವಕಾಶ ಸಿಕ್ಕಿಲ್ಲ. ಶ್ರೀಲಂಕಾದಲ್ಲಿ ನಡೆಯುವ ಪ್ರಮುಖ ಸರಣಿಯಲ್ಲಿ ಆಡುವ ಕನಸಿದೆ. ಇದಕ್ಕಾಗಿ ನಾನು ಕಠಿಣ ತಾಲೀಮು ನಡೆಸಿ ಸಜ್ಜುಗೊಂಡಿದ್ದೇನೆ’ ಎಂದು ಹೂಡ ಹೇಳಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್‌ ಹೂಡ ಬರೋಡ ತಂಡದ ಪರ 31 ಪಂದ್ಯಗಳನ್ನು ಆಡಿದ್ದಾರೆ. 2208 ರನ್‌ಗಳನ್ನು ದಾಖಲಿಸಿದ್ದು ಏಳು ವಿಕೆಟ್ ಕಬಳಿಸಿದ್ದಾರೆ.

‘ಡ್ರೆಸಿಂಗ್ ಕೊಠಡಿಯಲ್ಲಿ ಅನುಭವಿ ಆಟಗಾರರೊಂದಿಗೆ ಚರ್ಚೆ ನಡೆಸಿದ್ದರಿಂದ ಸಾಕಷ್ಟು ಹೊಸ ಸಂಗತಿಗಳನ್ನು ಕಲಿತುಕೊಂಡೆ. ದೋನಿ ನೀಡಿದ ಸಲಹೆಗಳನ್ನು ನನ್ನ ಆಟದಲ್ಲಿ ಅಳವಡಿಸಿಕೊಂಡಿದ್ದೇನೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry