ಇಂಡಿಯಾನಾ ವೇಲ್ಸ್‌: ಹಿಂದೆ ಸರಿದ ವಾವ್ರಿಂಕಾ

7

ಇಂಡಿಯಾನಾ ವೇಲ್ಸ್‌: ಹಿಂದೆ ಸರಿದ ವಾವ್ರಿಂಕಾ

Published:
Updated:
ಇಂಡಿಯಾನಾ ವೇಲ್ಸ್‌: ಹಿಂದೆ ಸರಿದ ವಾವ್ರಿಂಕಾ

ಮಿಯಾಮಿ: ಸ್ವಿಟ್ಜರ್ಲೆಂಡ್‌ ಆಟಗಾರ ಸ್ಟಾನಿಸ್ಲಾಸ್‌ ವಾವ್ರಿಂಕಾ ಇದೇ ತಿಂಗಳು ನಡೆಯಲಿರುವ ಇಂಡಿಯಾನಾ ವೇಲ್ಸ್‌ ಹಾಗೂ ಮಿಯಾಮಿ ಓಪನ್ ಟೆನಿಸ್ ಟೂರ್ನಿಗಳಿಂದ ಹಿಂದೆಸರಿದಿದ್ದಾರೆ.

ಮೊಣಕಾಲು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಕಣಕ್ಕಿಳಿಯುವುದಾಗಿ ವಾವ್ರಿಂಕಾ ಹೇಳಿದ್ದಾರೆ. ವಿಂಬಲ್ಡನ್‌ ಹಾಗೂ ಕ್ವೀನ್ಸ್‌ ಕ್ಲಬ್‌ ಟೂರ್ನಿಗಳಲ್ಲಿ ಆರಂಭಿಕ ಸುತ್ತುಗಳಲ್ಲಿಯೇ ಸೋತಿದ್ದರು. ಆಸ್ಟ್ರೇಲಿಯಾ ಓಪನ್‌ನಲ್ಲಿ ಕೂಡ ಎರಡನೇ ಸುತ್ತಿನಲ್ಲಿ ಪರಾಭವಗೊಂಡಿದ್ದರು.

‘ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡು ಕಣಕ್ಕಿಳಿದಿದ್ದೆ. ಆದರೆ ಆಸ್ಟ್ರೇಲಿಯಾ ಓಪನ್‌ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಪೈಪೋಟಿ ನಡೆಸಲು ಸಾಧ್ಯವಾಗದೇ  ಹಿನ್ನಡೆ ಅನುಭವಿಸಿದೆ. ನನ್ನ ತಂಡದೊಂದಿಗೆ ಈ ಕುರಿತು ಚರ್ಚೆ ನಡೆಸಿದೆ. ಸದ್ಯ ನಾನು ಟೆನಿಸ್ ಅಂಗಳದಿಂದ ದೂರ ಉಳಿದು ಅಭ್ಯಾಸ ನಡೆಸುವ ತೀರ್ಮಾನಕ್ಕೆ ಬಂದಿದ್ದೇನೆ’ ಎಂದು ವಾವ್ರಿಂಕಾ ಹೇಳಿದ್ದಾರೆ.

‘ಸೋಲುಗಳಿಂದ ಸಾಕಷ್ಟು ಪಾಠ ಕಲಿತೆ. ನನ್ನ ಆಟದ ಸಾಮರ್ಥ್ಯವನ್ನು ತಿಳಿದುಕೊಳ್ಳಲು ಹಿಂದಿನ ಟೂರ್ನಿಗಳು ಸಹಕಾರಿಯಾದವು. ಮೊದಲಿನ ಫಾರ್ಮ್‌ಗೆ ಮರಳುವುದು ನನ್ನ ಗುರಿ’ ಎಂದು ಅವರು ಹೇಳಿದ್ದಾರೆ.

ಗಾಯಗೊಂಡಿರುವ ರಿಚರ್ಡ್‌ ಗ್ಯಾಸ್ಕ್ವೆಟ್‌ ಹಾಗೂ ಜೊ ವಿಲ್ಫ್ರೆಡ್ ಸೊಂಗ ಕೂಡ ಇಂಡಿಯಾನಾ ವೇಲ್ಸ್‌ನಲ್ಲಿ ಆಡುತ್ತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry