ವಾಲಿಬಾಲ್‌ ಆಟಗಾರ ಯತೀಶ್ ನಿಧನ

7

ವಾಲಿಬಾಲ್‌ ಆಟಗಾರ ಯತೀಶ್ ನಿಧನ

Published:
Updated:
ವಾಲಿಬಾಲ್‌ ಆಟಗಾರ ಯತೀಶ್ ನಿಧನ

ಬೆಂಗಳೂರು: ಹಿರಿಯ ವಾಲಿಬಾಲ್ ಆಟಗಾರ ಎಲ್‌.ಆರ್‌ ಯತೀಶ್‌ (50) ಅವರು ಶುಕ್ರವಾರ ಇಲ್ಲಿ ನಿಧನರಾಗಿದ್ದಾರೆ.

ದೀರ್ಘಕಾಲದ ಅನಾರೋಗ್ಯದ ಕಾರಣ ಅವರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ಹೇಳಿವೆ. ಪ್ರಸ್ತುತ ಐಟಿಐ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರು ಕರ್ನಾಟಕ ತಂಡದ ಕೋಚ್ ಕೂಡ ಆಗಿದ್ದರು. ಇವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.

ರಾಷ್ಟ್ರ ಮಟ್ಟದ ಟೂರ್ನಿಗಳಲ್ಲಿ ಕರ್ನಾಟಕ ತಂಡದ ಪರ ಆಡಿದ ಅನುಭವ ಹೊಂದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry