ಟೆನಿಸ್: ಸೆಮಿಫೈನಲ್‌ಗೆ ಡೆಲ್‌ ಪೊಟ್ರೊ

7

ಟೆನಿಸ್: ಸೆಮಿಫೈನಲ್‌ಗೆ ಡೆಲ್‌ ಪೊಟ್ರೊ

Published:
Updated:
ಟೆನಿಸ್: ಸೆಮಿಫೈನಲ್‌ಗೆ ಡೆಲ್‌ ಪೊಟ್ರೊ

ಅಕಾಪುಲ್ಕೊ: ಅರ್ಜೆಂಟೀನಾದ ಆಟಗಾರ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಮೆಕ್ಸಿಕನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದರು.

ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಡೆಲ್ ಪೊಟ್ರೊ 6–2, 7–6ರಲ್ಲಿ ನೇರ ಸೆಟ್‌ಗಳಿಂದ ಡೊಮಿನಿಕ್ ಥೀಮ್ ಅವರನ್ನು ಮಣಿಸಿದರು.

ಅಮೆರಿಕ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದ ಅವರು ಮೊದಲ ಸೆಟ್‌ನಲ್ಲಿ ಎದುರಾಳಿಯ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಆದರೆ ಎರಡನೇ ಸೆಟ್‌ನಲ್ಲಿ ಕೊನೆಯ ಹಂತದವರೆಗೂ ಪ್ರಬಲ ಪೈಪೋಟಿ ಎದುರಿಸಿದರು.

ಟೈಬ್ರೇಕರ್‌ನಲ್ಲಿ ಥೀಮ್‌ ಡಬಲ್ ಫಾಲ್ಟ್ ಎಸಗುವ ಮೂಲಕ ಡೆಲ್‌ ಪೊಟ್ರೊ ಅವರ ಹಾದಿಯನ್ನು ಸುಗಮಗೊಳಿಸಿದರು. ಸೆಮಿಫೈನಲ್‌ನಲ್ಲಿ ಅವರು ಅಲೆಕ್ಸಾಂಡರ್‌ ಜ್ವೆರವ್ ಎದುರು ಆಡಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಜ್ವೆರವ್‌ 6–4, 6–1ರಲ್ಲಿ ಅಮೆರಿಕದ ರ‍್ಯಾನ್ ಹ್ಯಾರಿಸನ್‌ಗೆ ಸೋಲುಣಿಸಿದ್ದಾರೆ.

ರ‍್ಯಾನ್ ಹ್ಯಾರಿಸ್‌ ಎರಡನೇ ಸೆಟ್‌ನಲ್ಲಿ ಕೇವಲ ಒಂದು ಗೇಮ್‌ ಮಾತ್ರ ಗೆದ್ದರು.

ಕೆವಿನ್ ಆ್ಯಂಡರ್ಸನ್‌ 7–6, 6–4ರಲ್ಲಿ ದಕ್ಷಿಣ ಕೊರಿಯಾದ ಯುವ ಆಟಗಾರ ಚುಂಗ್ ಹೆಯಾನ್ ಎದುರು ಗೆದ್ದರು. 21 ವರ್ಷದ ಅಮೆರಿಕದ ಆಟಗಾರ ಜೋರ್ಡ್‌ ಡೊನಾಲ್ಡ್‌ 6–3, 6–1ರಲ್ಲಿ ನೇರ ಸೆಟ್‌ಗಳಿಂದ ಸ್ಪೇನ್‌ನ ಫೆಲಿಸಿಯಾನೊ ಲೊಪೆಜ್ ಎದುರು ಜಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry