‘ಕಸ ವಿಲೇವಾರಿಯಲ್ಲಿ ವೈಫಲ್ಯ’

7

‘ಕಸ ವಿಲೇವಾರಿಯಲ್ಲಿ ವೈಫಲ್ಯ’

Published:
Updated:

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸಾರ್ವಜನಿಕರು ವಿಂಗಡಿಸಿ ನೀಡುವ ತ್ಯಾಜ್ಯ ವಿಲೇವಾರಿ ಮಾಡುವಲ್ಲಿ ಸರ್ಕಾರ ಹಾಗೂ ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ’ ಎಂದು ಮಲ್ಲೇಶ್ವರ ಶಾಸಕ ಸಿ.ಎನ್.ಅಶ್ವತ್ಥ ನಾರಾಯಣ ಆರೋಪಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ವಿವರಿಸಿದ ಅವರು, ‘ಜನರ ತೆರಿಗೆ ಹಣದಲ್ಲಿ 1 ಕೆ.ಜಿ. ಕಸದ ವಿಲೇವಾರಿಗೆ ₹ 13 ಖರ್ಚು ಮಾಡಲಾಗುತ್ತಿದೆ. ಆದರೂ ಫಲಿತಾಂಶ ಶೂನ್ಯವಾಗಿದೆ’ ಎಂದರು.

‘ಬಿಬಿಎಂಪಿ ಕಸ ಸಂಗ್ರಹಣೆ ಹಾಗೂ ವಿಲೇವಾರಿಗೆ ವಾರ್ಷಿಕ ₹ 1,632 ಕೋಟಿ ಖರ್ಚು ಮಾಡುತ್ತಿದೆ. ಆದರೆ, ಜನರು ಬೇರ್ಪಡಿಸಿ ನೀಡಿದ ಕಸ

ವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲ. ನಿಜವಾಗಿಯೂ ಈ ಹಣ ಕಸ ವಿಲೇವಾರಿಗೆ ವಿನಿಯೋಗ ಮಾಡಲಾಗುತ್ತಿದೆಯೇ ಹೇಗೆ’ ಎಂಬ ಅನುಮಾನ ವ್ಯಕ್ತಪಡಿಸಿದರು.

‘ಒಂದೆಡೆ ಎಲೆಕ್ಟ್ರಿಕ್‌ ವಾಹನ ಖರೀದಿಸಿ ಬೆಂಗಳೂರಿನ ವಾಯು ಮಾಲಿನ್ಯ ತಡೆಯಲು ಮುಂದಾಗಿರುವ ಸರ್ಕಾರ ಮತ್ತೊಂದೆಡೆ ಅವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡುತ್ತಿದೆ. ಇದರಿಂದ ಮೀಥೇನ್‌ ಅನಿಲ ಉತ್ಪತ್ತಿಯಾಗು ತ್ತಿದ್ದು ಇದರಿಂದ ಪರಿಸರ ಮತ್ತಷ್ಟು ಹಾಳು ಮಾಡಲು ಅನುವು ಮಾಡಿ

ಕೊಡಲಾಗಿದೆ’ ಎಂದು ವ್ಯಂಗ್ಯವಾಡಿದರು.

‘₹ 800 ಕೋಟಿಗೂ ಹೆಚ್ಚು ಖರ್ಚು ಮಾಡಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗಿದೆ. ಇಲ್ಲಿ ಪ್ರತಿದಿನ 2,800 ಟನ್‌ ಸಾಮರ್ಥ್ಯದ ಕಸ ವಿಲೇವಾರಿ ಮಾಡುವ ಉದ್ದೇಶ ಹೊಂದಲಾಗಿದೆ. ಅದರೆ, ಇದು ಶೇ 7ರಷ್ಟೂ ಬಳಕೆಯಾಗದೆ ಶಿಥಿಲಾವಸ್ಥೆ ತಲುಪಿದೆ. ‘2017–18ರ ಬಿಬಿಎಂಪಿ ಸಮೀಕ್ಷೆ ಪ್ರಕಾರ ನಗರದಲ್ಲಿ ಪ್ರತಿನಿತ್ಯ 1,524 ಟನ್‌ ಬೇರ್ಪಡಿಸಿದ ಕಸ ಉತ್ಪತ್ತಿಯಾಗುತ್ತದೆ. ಅದರಲ್ಲಿ ಶೇ.75ರಷ್ಟು ಅಂದರೆ 1143 ಟನ್‌ ಹಸಿ ಕಸ ಇರುತ್ತದೆ. ಪ್ರತಿ

ದಿನ 180 ಟನ್‌ ಹಸಿ ಕಸ ವಿಲೇವಾರಿ ಯಾಗುತ್ತಿದೆ. ಹಾಗಾದರೆ ಉಳಿದ ಕಸ ಎಲ್ಲಿಗೆ ಹೋಗುತ್ತಿದೆ’ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry