ವೆಂಕಟೇಶ್ ಪ್ರಸಾದ್ ರಾಜೀನಾಮೆ

ಭಾನುವಾರ, ಮಾರ್ಚ್ 24, 2019
34 °C

ವೆಂಕಟೇಶ್ ಪ್ರಸಾದ್ ರಾಜೀನಾಮೆ

Published:
Updated:
ವೆಂಕಟೇಶ್ ಪ್ರಸಾದ್ ರಾಜೀನಾಮೆ

ನವದೆಹಲಿ: ಭಾರತ ಜೂನಿಯರ್ ಕ್ರಿಕೆಟ್ ತಂಡಗಳ ಆಯ್ಕೆ ಸಮಿತಿ ಮುಖ್ಯಸ್ಥ ವೆಂಕಟೇಶ್ ಪ್ರಸಾದ್‌ ತಮ್ಮ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.

ವೆಂಕಟೇಶ್ ಪ್ರಸಾದ್ ನೇತೃತ್ವದ ಸಮಿತಿಯು ಆಯ್ಕೆ ಮಾಡಿದ್ದ 19 ವರ್ಷದೊಳಗಿನವರ ಭಾರತ ತಂಡವು ಈಚೆಗೆ ವಿಶ್ವಕಪ್ ಗೆದ್ದಿತ್ತು.  ಆದರೂ ಅವರು ರಾಜೀನಾಮೆ ನೀಡಿರುವುದು ಕ್ರಿಕೆಟ್‌ ವಲಯದಲ್ಲಿ ಅಚ್ಚರಿ ಮೂಡಿಸಿದೆ. 30 ತಿಂಗಳಿಂದ ಅವರು ಸಮಿತಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.

ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿರುವುದಾಗಿ ಹೇಳಿದ್ದರೂ ಬಿಸಿಸಿಐ ಪದಾಧಿಕಾರಿಗಳ ಜೊತೆಗಿನ ಶೀತಲ ಸಮರದಿಂದ ಅವರು ಬೇಸರಗೊಂಡಿದ್ದರು ಎಂಬ ಮಾತು ಕೇಳಿಬರುತ್ತಿದೆ.

‘ಹಿತಾಸಕ್ತಿ ಸಂಘರ್ಷಕ್ಕೆ ಬಲಿಯಾಗಲು ತಾವು ಸಿದ್ಧವಿಲ್ಲ’ ಎಂದು ಪ್ರಸಾದ್‌  ಹೇಳಿರುವುದಾಗಿ ತಿಳಿದು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry