ಈಶಾನ್ಯ ಮೂರು ರಾಜ್ಯಗಳ ಮತ ಎಣಿಕೆ ಇಂದು

ಗುರುವಾರ , ಮಾರ್ಚ್ 21, 2019
32 °C

ಈಶಾನ್ಯ ಮೂರು ರಾಜ್ಯಗಳ ಮತ ಎಣಿಕೆ ಇಂದು

Published:
Updated:
ಈಶಾನ್ಯ ಮೂರು ರಾಜ್ಯಗಳ ಮತ ಎಣಿಕೆ ಇಂದು

ಅಗರ್ತಲಾ/ಕೊಹಿಮಾ/ಶಿಲ್ಲಾಂಗ್ (ಪಿಟಿಐ): ಈಶಾನ್ಯ ರಾಜ್ಯಗಳಾದ ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾ ವಿಧಾನಸಭೆಗಳಿಗೆ ನಡೆದ ಚುನಾ ವಣೆಯ ಮತ ಎಣಿಕೆ ಶನಿವಾರ ನಡೆಯಲಿದೆ.

‘ಬಿಗಿ ಭದ್ರತೆ ನಡುವೆ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ’ ಎಂದು ಚುನಾವಣಾ ಆಯೋಗದ ಅಧಿ

ಕಾರಿಗಳು ವಿವರಿಸಿದ್ದಾರೆ. ತ್ರಿಪುರಾದಲ್ಲಿ ಫೆಬ್ರುವರಿ 18 ಮತ್ತು ನಾಗಾಲ್ಯಾಂಡ್, ಮೇಘಾಲಯಗಳಲ್ಲಿ 27ಕ್ಕೆ ಮತದಾನ ನಡೆದಿತ್ತು.

‘ತ್ರಿಪುರಾದಲ್ಲಿ 25 ವರ್ಷಗಳಿಂದ ಅಧಿಕಾರದ ಗದ್ದುಗೆಯಲ್ಲಿರುವ ಎಡರಂಗದ ಓಟಕ್ಕೆ ಬಿಜೆಪಿ ತಡೆ ಹಾಕಲಿದೆ ಮತ್ತು ಉಳಿದ ಎರಡು ರಾಜ್ಯಗಳಲ್ಲೂ ಬಿಜೆಪಿ ಪ್ರಾಬಲ್ಯ ಮೆರೆಯಲಿದೆ’ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ.

ಮೇಘಾಲಯದಲ್ಲಿ ಹತ್ತು ವರ್ಷಗಳಿಂದ ಕಾಂಗ್ರೆಸ್ ಸರ್ಕಾರವಿದೆ. 2008ರಲ್ಲಿ ಮೂರು ತಿಂಗಳ ರಾಷ್ಟ್ರಪತಿ ಆಡಳಿತವನ್ನು ಹೊರತುಪಡಿಸಿದರೆ 2003ರಿಂದಲೂ ನಾಗಾಲ್ಯಾಂಡ್ ಆಡಳಿತ ನಾಗಾ ಪೀಪಲ್ಸ್ ಫ್ರಂಟ್ ಕೈಯಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry