ಪ್ರತ್ಯೇಕ ಅಪಘಾತ; ಮೂವರ ದುರ್ಮರಣ

7

ಪ್ರತ್ಯೇಕ ಅಪಘಾತ; ಮೂವರ ದುರ್ಮರಣ

Published:
Updated:

ಬೆಂಗಳೂರು: ಹಲಸೂರು, ಆರ್‌.ಟಿ.ನಗರ ಹಾಗೂ ಎಲೆಕ್ಟ್ರಾನಿಕ್‌ ಸಿಟಿ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಸೇರಿ ಮೂವರು ಮೃತಪಟ್ಟಿದ್ದಾರೆ.

ಟೆಕಿ ಸಾವು: ಇಂದಿರಾನಗರ ಮೆಟ್ರೊ ನಿಲ್ದಾಣದ ಬಳಿ ಗುರುವಾರ ರಾತ್ರಿ ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದು ಸೈಯದ್ ನಹೀಂ (30) ಎಂಬುವರು ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆಯ ನಹೀಂ, ಜೆ.ಪಿ.ನಗರದಲ್ಲಿ ನೆಲೆಸಿದ್ದರು.

ಪಾದಚಾರಿ ದುರ್ಮರಣ: ಆರ್‌.ಟಿ.ನಗರ ಸಮೀಪದ ಸಿಬಿಐ ಜಂಕ್ಷನ್‌ನಲ್ಲಿ ಶುಕ್ರವಾರ ಬೆಳಗಿನ ಜಾವ ರಸ್ತೆ ದಾಟುತ್ತಿದ್ದ ಆರ್‌.ಕೆ.ದಾಸ್ (78) ಎಂಬುವರ ಮೇಲೆ ತೆಲಂಗಾಣದ ಬಸ್ ಹರಿದಿದೆ. ಆರೋಪಿ ಚಾಲಕ ಪೆಲ್ಲಪಲ್ಲಿ ಸ್ವಾಮಿ ಎಂಬುವರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ಸೆಕ್ಯುರಿಟಿ ಗಾರ್ಡ್ ಸಾವು: ಎಲೆಕ್ಟ್ರಾನಿಕ್‌ಸಿಟಿ ಸಮೀಪದ ಎಚ್‌ಸಿಎಲ್ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ವಿಭಜಕಕ್ಕೆ ಬೈಕ್ ಡಿಕ್ಕಿಯಾಗಿ ಜ್ಯೋತಿರ್ಮಯಿನಾಗ್ (28) ಎಂಬುವರು ಮೃತಪಟ್ಟು, ಅವರ ಸ್ನೇಹಿತ ನಿರತಾನ್ (26) ಗಾಯಗೊಂಡಿದ್ದಾರೆ. ಇಬ್ಬರೂ ಅಸ್ಸಾಂನವರಾಗಿದ್ದು, ಎಲೆಕ್ಟ್ರಾನಿಕ್‌ಸಿಟಿಯಲ್ಲಿ ವಾಸವಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry