ವಾಣಿಜ್ಯ ಉದ್ದೇಶದ ಛಾಯಾಗ್ರಹಣ ನಿಷೇಧ

ಮಂಗಳವಾರ, ಮಾರ್ಚ್ 19, 2019
26 °C

ವಾಣಿಜ್ಯ ಉದ್ದೇಶದ ಛಾಯಾಗ್ರಹಣ ನಿಷೇಧ

Published:
Updated:
ವಾಣಿಜ್ಯ ಉದ್ದೇಶದ ಛಾಯಾಗ್ರಹಣ ನಿಷೇಧ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ‘ಪ್ರೀ ವೆಡ್ಡಿಂಗ್‌’ ಹಾಗೂ ‘ಪ್ರೆಗ್ನೆನ್ಸಿ’ ಫೋಟೊಶೂಟ್‌ ಹಾವಳಿಯನ್ನು ತಪ್ಪಿಸಲು, ವಾಣಿಜ್ಯ ಉದ್ದೇಶದ ಛಾಯಾ

ಗ್ರಹಣವನ್ನು ನಿಷೇಧಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.

‘ಹೆಚ್ಚು ಪ್ರಕಾಶಮಾನದ ಫ್ಲಾಷ್‌ ಗಳನ್ನು ಬಳಸಿ ಛಾಯಾಗ್ರಹಣ ಮಾಡುವುದರಿಂದ ಜೇನುಗೂಡುಗಳಲ್ಲಿರುವ ನೊಣಗಳಿಗೆ ಅಡಚಣೆಯಾಗಿ ದಾಳಿ ನಡೆಸುವ ಸಂಭವ ಇರುತ್ತದೆ. ಹೀಗಾಗಿ, ಈ ಕ್ರಮ ಕೈಗೊಂಡಿದ್ದೇವೆ’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಂ. ಜಗದೀಶ್‌ ತಿಳಿಸಿದರು.

‘ಪ್ರೀ ವೆಡ್ಡಿಂಗ್‌ ಹಾಗೂ ಪ್ರೆಗ್ನೆನ್ಸಿ ಫೋಟೊಶೂಟ್‌ಗಾಗಿ ಬರುವವರು ಉದ್ಯಾನದಲ್ಲಿಯೇ ಬಟ್ಟೆ ಬದಲಿಸಿ, ಛಾಯಾಗ್ರಹಣ ಮಾಡಿಸಿಕೊಳ್ಳುತ್ತಿದ್ದರು. ಇದರಿಂದ ಉದ್ಯಾನಕ್ಕೆ ಮಕ್ಕಳೊಂದಿಗೆ ಬರುವ ಪ್ರವಾಸಿಗರಿಗೆ ಮುಜುಗರ ಉಂಟಾಗುತ್ತಿತ್ತು. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು’ ಎಂದು ಹೇಳಿದರು.

‘ವಾಕಥಾನ್‌, ಮ್ಯಾರಥಾನ್‌ಗಳಿಗೂ ಲಾಲ್‌ಬಾಗ್‌ನಲ್ಲಿ ಅವಕಾಶವಿಲ್ಲ. ಉದ್ಯಾನದ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿ

ದ್ದೇವೆ. ಪ್ರವಾಸಿಗರು ಚಿತ್ರ ತೆಗೆದುಕೊಳ್ಳುವುದಕ್ಕೆ ಯಾವುದೇ ಅಡ್ಡಿ ಇಲ್ಲ’ ಎಂದು ಉಪನಿರ್ದೇಶಕ ಎಂ.ಆರ್. ಚಂದ್ರಶೇಖರ್ ತಿಳಿಸಿದರು.

ಕಬ್ಬನ್‌ಪಾರ್ಕ್‌ನಲ್ಲಿ ಶುಲ್ಕ ಪಡೆದು, ಅನುಮತಿ: ‘ಸದ್ಯ ಕಬ್ಬನ್‌ಪಾರ್ಕ್‌ ನಲ್ಲಿ ಈ ರೀತಿಯ ಫೋಟೊಶೂಟ್‌ ನಿಷೇಧಿಸುವ ಬಗ್ಗೆ ಯಾವುದೇ ಕ್ರಮ

ಕೈಗೊಂಡಿಲ್ಲ. ವಾಕಥಾನ್‌, ಮ್ಯಾರಥಾನ್‌ ಗಳಿಗೆ ₹25 ಸಾವಿರ ಶುಲ್ಕ ಪಡೆದು ಅನುಮತಿ ನೀಡುತ್ತಿದ್ದೇವೆ’ ಎಂದು ಜಗದೀಶ್‌ ಮಾಹಿತಿ ನೀಡಿದರು.

‘ಕಬ್ಬನ್ ಉದ್ಯಾನದಲ್ಲಿ ದಿನಕ್ಕೆ 20 ರಿಂದ 30 ಫೋಟೊಶೂಟ್‌ಗಳು ನಡೆಯುತ್ತವೆ. ಉದ್ಯಾನದಲ್ಲಿ ನೆಮ್ಮದಿಯಿಂದ ಕಾಲಕಳೆಯಲು ಇದು ಅಡಚಣೆ ಆಗು

ತ್ತದೆ. ಉದ್ಯಾನಗಳಲ್ಲಿ ಇದಕ್ಕೆ ಅವಕಾಶ ನೀಡದಿರುವುದು ಉತ್ತಮ’ ಎಂದು ಕಬ್ಬನ್‌ ಉದ್ಯಾನದ ನಡಿಗೆದಾರ ರಾಘವ್‌ ಅವರು ಅಭಿಪ್ರಾಯ

ವ್ಯಕ್ತಪಡಿಸಿದರು.

ಏನಿದು ಪ್ರೀ ವೆಡ್ಡಿಂಗ್ ಶೂಟಿಂಗ್?

ಮದುವೆ ಪೂರ್ವದಲ್ಲಿ ವಧು ಹಾಗೂ ವರರನ್ನು ಸುಂದರ ತಾಣದಲ್ಲಿ ಫೋಟೊಗ್ರಫಿ ಅಥವಾ ವಿಡಿಯೋ ಮಾಡುವುದೇ ಪ್ರೀ ವೆಡ್ಡಿಂಗ್ ಫೋಟೊಶೂಟ್‌. ಇತ್ತೀಚೆಗೆ ಇದು ಟ್ರೆಂಡ್ ಆಗಿದೆ. ಕನಿಷ್ಠ ₹1 ಲಕ್ಷದಿಂದ ₹8 ಲಕ್ಷದವರೆಗೂ ಹಣ ನೀಡಿ ಈ ಫೋಟೊಶೂಟ್‌ ಮಾಡಿಸಲಾಗುತ್ತದೆ. ಗರ್ಭಿಣಿಯರಿಗೆ ತಮ್ಮ ತಾಯ್ತನದ ನೆನಪಿಗಾಗಿ ‘ಪ್ರೆಗ್ನೆನ್ಸಿ’ ಫೋಟೊಶೂಟ್‌ ಸಹ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry