ಶೂಟಿಂಗ್‌: ಜಿತು ಮೇಲೆ ನಿರೀಕ್ಷೆ

7

ಶೂಟಿಂಗ್‌: ಜಿತು ಮೇಲೆ ನಿರೀಕ್ಷೆ

Published:
Updated:
ಶೂಟಿಂಗ್‌: ಜಿತು ಮೇಲೆ ನಿರೀಕ್ಷೆ

ನವದೆಹಲಿ: ಭಾರತದ ಅನುಭವಿ ಶೂಟರ್‌ ಜಿತು ರಾಯ್‌, ಮೆಕ್ಸಿಕನ್‌ ಸಿಟಿಯಲ್ಲಿ ಶನಿವಾರದಿಂದ ನಡೆಯುವ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸವಾಲು ಎತ್ತಿಹಿಡಿಯಲಿದ್ದಾರೆ.

ಪುರುಷರ 10 ಮೀಟರ್ಸ್‌ ಏರ್‌ ಪಿಸ್ತೂಲ್‌ನ ಅರ್ಹತಾ ಸುತ್ತಿನಲ್ಲಿ ಜಿತು ಕಣಕ್ಕಿಳಿಯಲಿದ್ದಾರೆ. ಓಂ ಪ್ರಕಾಶ್‌ ಮಿಥರ್‌ವಾಲಾ ಮತ್ತು ಶಾಜರ್‌ ರಿಜ್ವಿ ಅವರೂ ಇದೇ ವಿಭಾಗದಲ್ಲಿ ಪದಕ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.

ಮಹಿಳೆಯರ 10 ಮೀಟರ್ಸ್‌ ಏರ್‌ ರೈಫಲ್‌ನಲ್ಲಿ ಅಪೂರ್ವಿ ಚಾಂಡೇಲಾ ಮತ್ತು ಮೆಹುಲಿ ಘೋಷ್‌ ಭಾರತದ ಭರವಸೆಯಾಗಿದ್ದಾರೆ.

ಚಾಂಪಿಯನ್‌ಷಿಪ್‌ನಲ್ಲಿ 50 ದೇಶಗಳ 404 ಶೂಟರ್‌ಗಳು ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ. 12 ದಿನಗಳ ಕಾಲ ಸ್ಪರ್ಧೆಗಳು ಜರುಗಲಿವೆ. ಮೊದಲ ದಿನ ಶಾಟ್‌ಗನ್‌ ಮತ್ತು ಪಿಸ್ತೂಲ್‌ ವಿಭಾಗದ ಫೈನಲ್‌ ಆಯೋಜನೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry