ಪಾದಯಾತ್ರಿಗಳಿಗೆ ಬೀಳ್ಕೊಡುಗೆ

ಸೋಮವಾರ, ಮಾರ್ಚ್ 25, 2019
28 °C
ಶ್ರೀಶೈಲಂಗೆ ಹೊರಟ ಯಾತ್ರಿಗಳು; -ಮಲ್ಲಯ್ಯನ ಕಂಬಿಗಳು

ಪಾದಯಾತ್ರಿಗಳಿಗೆ ಬೀಳ್ಕೊಡುಗೆ

Published:
Updated:
ಪಾದಯಾತ್ರಿಗಳಿಗೆ ಬೀಳ್ಕೊಡುಗೆ

ರಬಕವಿ ಬನಹಟ್ಟಿ: ಯುಗಾದಿ ದಿನ ಆಂಧ್ರ ಪ್ರದೇಶದ ಶ್ರೀಶೈಲಂನಲ್ಲಿ ನಡೆಯುವ ಮಲ್ಲಿಕಾರ್ಜುನ ದೇವರ ಜಾತ್ರೆಗೆ ಮಲ್ಲಯ್ಯನ ಕಂಬಿಗಳು ಮತ್ತು ಪಾದಯಾತ್ರೆ ಮೂಲಕ ತೆರಳುವ ಭಕ್ತರನ್ನು ಗುರುವಾರ ರಾತ್ರಿ ಬೀಳ್ಕೊಡಲಾಯಿತು.

ಸ್ಥಳೀಯ ಗಾಂಧಿ ಚೌಕ ಹತ್ತಿರ ನಂದಿಕೋಲು ಮತ್ತು ಮಲ್ಲಯ್ಯನ ಕಂಬಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಮಲ್ಲಯ್ಯನ ಕಂಬಿಗೆ ಮಹಿಳೆಯರು ಆರತಿ ಮಾಡಿದರು. ನಂತರ ಹಸಿ ಕಡ್ಲಿ ಮತ್ತು ಬೆಲ್ಲ ನೈವೇದ್ಯ ಮಾಡಿದರು. ನೂರಾರು ಜನ ಸೇರಿ ಸಾಮೂಹಿಕವಾಗಿ ಮಲ್ಲಿಕಾರ್ಜುನ ದೇವರ ಮಂಗಳಾರತಿ ನೆರವೇರಿಸಿದರು.

ನಂತರ ಮಲ್ಲಯ್ಯನ ಕಂಬಿ ಮತ್ತು ಬನಹಟ್ಟಿಯಿಂದ ತೆರಳುವ ಪಾದಯಾತ್ರಿಗಳನ್ನು ಸೇರಿದ ಜನಸ್ತೋಮ ಬೀಳ್ಕೊಟ್ಟಿತು. ರಾಚಯ್ಯಸ್ವಾಮಿ ಮಠಪತಿ ಮತ್ತು ಬಾಳಯ್ಯಸ್ವಾಮಿ ಬೀಳಗಿ ಪಾದಯಾತ್ರೆ ನೇತೃತ್ವ ವಹಿಸಿದ್ದರು.

ಈ ಸಂದರ್ಭದಲ್ಲಿ ಶಶಿಕಾಂತಗೌಡ ಪಾಟೀಲ, ಶ್ರೀಶೈಲ ಧಬಾಡಿ, ಪಂಡಿತ ಪಟ್ಟಣ, ಚನ್ನಪ್ಪ ದಢೂತಿ,ಮಹಾಶಾಂತ ಶೆಟ್ಟಿ, ಚೇತನ ದಢೂತಿ, ರಾಜು ಕುಲಕರ್ಣಿ, ಈರಣ್ಣ ದಢೂತಿ, ನಾರಾಯಣ ಹೂಗಾರ, ಜ್ಯೋತಿ ದಢೂತಿ, ಶಂಕರ ಕೆಸರಗೊಪ್ಪ, ಶ್ರೀಶೈಲ ಮಠಪತಿ ಸೇರಿದಂತೆ ಮಂಗಳವಾರ ಮತ್ತು ಸೋಮವಾರ ಪೇಟೆ ದೈವ ಮಂಡಳಿ ಸದಸ್ಯರು ಇದ್ದರು.

10 ಸಾವಿರ ಲೀಟರ್‌ ನೀರು ವಿತರಣೆ: ಬೆಳಗಾವಿ ಜಿಲ್ಲೆಯ ಅಥಣಿ, ರಾಯಬಾಗ ಮತ್ತು ಜಮಖಂಡಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಶ್ರೀಶೈಲಕ್ಕೆ ಹೊರಟ ಸಾವಿರಾರು ಜನ ಪಾದಯಾತ್ರಿಗಳಿಗೆ ಪ್ರೊ.ಬಸವರಾಜ ಕೊಣ್ಣೂರ ನಾವಲಗಿ ಹತ್ತಿರ 10 ಸಾವಿರ ಲೀಟರ್ ಶುದ್ಧ ನೀರು ವಿತರಣೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry