ಅಂತಿಮ ಮತದಾರರ ಪಟ್ಟಿ ಪ್ರಕಟ

7
ಜಿಲ್ಲೆಯಲ್ಲಿ ಒಟ್ಟು 8.20 ಲಕ್ಷ ಮತದಾರರು

ಅಂತಿಮ ಮತದಾರರ ಪಟ್ಟಿ ಪ್ರಕಟ

Published:
Updated:

ಚಾಮರಾಜನಗರ: ಜಿಲ್ಲೆಯಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಚುರ ಪಡಿಸಲಾಗಿದ್ದು, ಒಟ್ಟು 8.20 ಲಕ್ಷ ಮತದಾರರನ್ನು ಅಂತಿಮಗೊಳಿಸಲಾಗಿದೆ.

ಜಿಲ್ಲಾಧಿಕಾರಿ ಬಿ. ರಾಮು ಅವರು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯ ವಿವರಗಳ ಬಗ್ಗೆ ತಿಳಿಸಿದರು.

ಜನವರಿ 1ಕ್ಕೆ ಅರ್ಹತಾ ದಿನಾಂಕ ನಿಗದಿಪಡಿಸಿ ಮತದಾರರ ಪಟ್ಟಿಯನ್ನು ತಯಾರಿಸಲಾಗಿತ್ತು. ಫೆ. 28ರಂದು ಅಂತಿಮ ಪಟ್ಟಿಯನ್ನು ಜಿಲ್ಲೆಯ ಉಪವಿಭಾಗಾಧಿಕಾರಿಗಳ ಕಚೇರಿ, ಎಲ್ಲ ತಾಲ್ಲೂಕುಗಳ ತಹಶೀಲ್ದಾರ್, ಉಪ ತಹಶೀಲ್ದಾರ್‌ ಕಚೇರಿ ಹಾಗೂ ಸಂಬಂಧಿಸಿದ ಮತಗಟ್ಟೆಗಳಲ್ಲಿ ಪ್ರಚುರ ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕರಡು ಮತದಾರರು:

ಕರಡು ಮತದಾರರ ಪಟ್ಟಿಯಲ್ಲಿ ಹನೂರು ವಿಧಾನಸಭಾ ಕ್ಷೇತ್ರದಲ್ಲಿ 1,04,150 ಪುರುಷ ಮತದಾರರು, 1,00,082 ಮಹಿಳಾ ಮತದಾರರು ಹಾಗೂ 16 ಇತರೆ ಮತದಾರರು ಇದ್ದು, ಒಟ್ಟು 2,04,248 ಮತದಾರರಿದ್ದರು. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 1,03,770 ಪುರುಷ ಮತದಾರರು, 1,04,266 ಮಹಿಳಾ ಮತದಾರರು ಹಾಗೂ 13 ಇತರೆ ಮತದಾರರನ್ನು ಒಳಗೊಂಡು ಒಟ್ಟು 2,08,049 ಮತದಾರರಿದ್ದರು.

ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 1,00,893 ಪುರುಷ, 1,02,584 ಮಹಿಳಾ ಮತದಾರರು ಹಾಗೂ 16 ಇತರೆ ಮತದಾರರು ಸೇರಿ ಒಟ್ಟು 2,03,493 ಮತದಾರರಿದ್ದರು. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲ್ಲಿ 1,00,142 ಪುರುಷ, 1,00,933 ಮಹಿಳಾ ಹಾಗೂ 17 ಇತರೆ ಮತದಾರರು ಸೇರಿ ಒಟ್ಟು 2,01,092 ಮತದಾರರು ಇದ್ದರು.

ಜಿಲ್ಲೆಯಲ್ಲಿ 4,08,955 ಪುರುಷ, 4,07,865 ಮಹಿಳಾ ಹಾಗೂ ಇತರೆ 62 ಮತದಾರರು ಸೇರಿದಂತೆ ಒಟ್ಟಾರೆ 8,16,882 ಮತದಾರರು ಕರಡು ಪಟ್ಟಿಯಲ್ಲಿ ಇದ್ದರು.

ಪರಿಷ್ಕೃತ ಪಟ್ಟಿ:  ನ. 30ರಿಂದ ಜ.22ರವರೆಗೆ ಪಟ್ಟಿಗೆ ಮತದಾರರ ಸೇರ್ಪಡೆ ಹಾಗೂ ಹೆಸರುಗಳನ್ನು ಕೈಬಿಡುವ ಕಾರ್ಯ ನಡೆದಿತ್ತು. ಜಿಲ್ಲೆಯಲ್ಲಿ ಒಟ್ಟು 10,127 ಪುರುಷ ಮತ್ತು 11,874 ಮಹಿಳಾ ಮತದಾರರು ಸೇರಿದಂತೆ ಒಟ್ಟು 22,001 ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ. ಪಟ್ಟಿಯಿಂದ 9,136 ಪುರುಷ, 8,829 ಮಹಿಳಾ ಮತದಾರರನ್ನು ಕೈಬಿಟ್ಟಿದ್ದು, ಒಟ್ಟು 17,965 ಮತದಾರರ ಹೆಸರನ್ನು ತೆಗೆದುಹಾಕಲಾಗಿದೆ.

 

ಅಂತಿಮ ಪಟ್ಟಿ: ಮತದಾರರ ಪಟ್ಟಿಯಲ್ಲಿ ಹನೂರು ವಿಧಾನಸಭಾ ಕ್ಷೇತ್ರದಲ್ಲಿ 1,04,292 ಪುರುಷ ಹಾಗೂ 1,00,567 ಮಹಿಳಾ ಮತದಾರರು ಸೇರಿದಂತೆ ಒಟ್ಟು 2,04,859 ಮತದಾರರಿದ್ದಾರೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 1,04,023 ಪುರುಷ, 1,05,066 ಮಹಿಳಾ ಮತದಾರರು ಸೇರಿ 2,09,089 ಮತದಾರರಿದ್ದಾರೆ.

ಚಾಮರಾಜನಗರ ಕ್ಷೇತ್ರದಲ್ಲಿ 1,00,816 ಪುರುಷ, 1,03,310 ಮಹಿಳಾ ಮತದಾರರನ್ನು ಒಳಗೊಂಡು ಒಟ್ಟು 2,04,126 ಮತದಾರರು ಇದ್ದಾರೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 1,00,820 ಪುರುಷ ಹಾಗೂ 1,02,032 ಮಹಿಳಾ ಮತದಾರರನ್ನು ಒಳಗೊಂಡಂತೆ 2,02,852 ಮತದಾರರು ಇದ್ದಾರೆ. ಜಿಲ್ಲೆಯಲ್ಲಿ ಒಟ್ಟು 8,20,926 ಮತದಾರರು ಇದ್ದು, ಈ ಪೈಕಿ 4,09,951 ಪುರುಷ ಮತ್ತು 4,10,975 ಮಹಿಳಾ ಮತದಾರರು ಇದ್ದಾರೆ.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಕೈಬಿಡುವುದು, ತಿದ್ದುಪಡಿ, ಸ್ಥಳಾಂತರಗಳಿಗೆ ಸಂಬಂಧಿಸಿದಂತೆ ನಿರಂತರವಾಗಿ ಅರ್ಜಿ ನಮೂನೆಗಳನ್ನು ಸ್ವೀಕರಿಸಲಾಗುತ್ತಿದೆ. ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಸೇರ್ಪಡೆಗೊಳ್ಳದಿದ್ದಲ್ಲಿ ನಮೂನೆ 6ರಲ್ಲಿ ಅರ್ಜಿಯನ್ನು ಆಯಾ ಮತಗಟ್ಟೆ ಅಧಿಕಾರಿಗೆ, ತಾಲ್ಲೂಕು ಕಚೇರಿ ಅಥವಾ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ ಅಂತಿಮಗೊಳಿಸಿ ಇಆರ್‌ಎಂಎಸ್ ತಂತ್ರಾಂಶದಲ್ಲಿ ಅಳವಡಿಸಿ ಪೂರಕ ಪಟ್ಟಿ ತಯಾರಿಸಲಾಗುತ್ತದೆ ಎಂದು ಅವರು ಹೇಳಿದರು.

ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಸೈಯದ್ ರಫಿ, ಪರಶಿವಮೂರ್ತಿ, ಬ್ಯಾಡಮೂಡ್ಲು ಬಸವಣ್ಣ, ಕಾಮರಾಜು, ಮಹೇಶ್ ಗೌಡ, ಇತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry