ಕೊಲೆಗೆ ಯತ್ನ, ಅಪಹರಣ ಆರೋಪ: ಸುನಾಮಿ ಕಿಟ್ಟಿ ಸೇರಿ ನಾಲ್ವರ ಬಂಧನ

7

ಕೊಲೆಗೆ ಯತ್ನ, ಅಪಹರಣ ಆರೋಪ: ಸುನಾಮಿ ಕಿಟ್ಟಿ ಸೇರಿ ನಾಲ್ವರ ಬಂಧನ

Published:
Updated:
ಕೊಲೆಗೆ ಯತ್ನ, ಅಪಹರಣ ಆರೋಪ: ಸುನಾಮಿ ಕಿಟ್ಟಿ ಸೇರಿ ನಾಲ್ವರ ಬಂಧನ

ಬೆಂಗಳೂರು: ಜ್ಞಾನ ಭಾರತಿ ಠಾಣೆ ವ್ಯಾಪ್ತಿಯಲ್ಲಿ ತೌಸಿತ್ ಹಾಗೂ ಗಿರೀಶ್ ಎಂಬುವರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪದಡಿ ಸುನಾಮಿ ಕಿಟ್ಟಿ ಹಾಗೂ ಆತನ ಮೂವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

ಫೆ. 28ರಂದು ಇಬ್ಬರನ್ನೂ ಅಪಹರಣ ಮಾಡಿದ್ದ ಆರೋಪಿಗಳು ಹೊರಮಾವು ಬಳಿಯ ತೋಟದ ಮನೆಯೊಂದರಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟಿದ್ದರು. ಅವರಿಂದ ತಪ್ಪಿಸಿಕೊಂಡ ಗಿರೀಶ್ ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದರು.

ತನಿಖೆ ಕೈಗೊಂಡ ಪೊಲೀಸರು ಸುನಾಮಿ ಕಿಟ್ಟಿ, ಸಂತೋಷ, ಅರ್ಜುನ ಹಾಗೂ ಯೋಗೇಶ್ ಎಂಬುವರನ್ನು ಬಂಧಿಸಿದ್ದಾರೆ. ಅವರಿಂದ ಪಿಸ್ತೂಲ್ ಜಪ್ತಿ ಮಾಡಿದ್ದಾರೆ.

ಮಹಿಳೆಯೊಬ್ಬರ ಜತೆ ತೌಸಿತ್ ಸಲುಗೆ ಬೆಳೆಸಿದ್ದರು. ಅವರ ಪತಿಯೇ ಈ ಕೃತ್ಯ ಎಸಗಲು ಆರೋಪಿಗಳಿಗೆ ಹೇಳಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry