ಬಿಜೆಪಿಗೆ ಅಭಿವೃದ್ಧಿ, ಬದ್ಧತೆ, ಸಾಂಘಿಕ ಪರಿಶ್ರಮದ ಗೆಲುವು: ಅಮಿತ್‌ ಶಾ

ಭಾನುವಾರ, ಮಾರ್ಚ್ 24, 2019
27 °C

ಬಿಜೆಪಿಗೆ ಅಭಿವೃದ್ಧಿ, ಬದ್ಧತೆ, ಸಾಂಘಿಕ ಪರಿಶ್ರಮದ ಗೆಲುವು: ಅಮಿತ್‌ ಶಾ

Published:
Updated:
ಬಿಜೆಪಿಗೆ ಅಭಿವೃದ್ಧಿ, ಬದ್ಧತೆ, ಸಾಂಘಿಕ ಪರಿಶ್ರಮದ ಗೆಲುವು: ಅಮಿತ್‌ ಶಾ

ನವದೆಹಲಿ: ಈಶಾನ್ಯದ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ತ್ರಿಪುರಾದಲ್ಲಿ ಬಿಜೆಪಿ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮೈತ್ರಿಕೂಟ ಮುನ್ನಡೆ ಸಾಧಿಸುತ್ತಿದ್ದಂತೆ ಸರ್ಕಾರ ರಚನೆ ಕಸರತ್ತುಗಳು ಆರಂಭವಾಗಿದೆ.

ತ್ರಿಪುರಾದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸುತ್ತಿದ್ದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಶನಿವಾರ ಮಧ್ಯಾಹ್ನ ಪಕ್ಷದ ಕಚೇರಿಗೆ ಬಂದಿದ್ದಾರೆ.

ಇಲ್ಲಿಗೆ ಬಂದ ಅಮಿತ್‌ ಶಾ ಅವರನ್ನು ಪಕ್ಷದ ಅಭಿಮಾನಿಗಳು ಹೂವು ಚೆಲ್ಲಿ ಸ್ವಾಗತಿಸಿದರು. ಶಾ ಅವರು ವಿಜಯದ ಸಂಕೇತವನ್ನು ತೋರಿಸುತ್ತಾ ಜನರತ್ತ ಕೈ ಬೀಸಿದರು.

‘ಸಾಮೂಹಿಕವಾಗಿ ಬಿಜೆಪಿಯನ್ನು ಬೆಂಬಲಿಸಿದ ತ್ರಿಪುರದ ಸಹೋದರ, ಸಹೋದರಿಯರಿಗೆ ಅಭಿನಂದನೆಗಳು. ಈ ಗೆಲುವು ಪ್ರಧಾನಿ ನರೇಂದ್ರ ಮೋದಿ ಅವರ ಈಶಾನ್ಯ ರಾಜ್ಯಗಳ ಅಭಿವೃದ್ಧಿಪರ ಹಾಗೂ ಬದ್ಧತೆಗೆ ಸಂದ ವಿಜಯ’ ಎಂದು ಅಮಿತ್‌ ಶಾ ಟ್ವೀಟ್‌ ಮಾಡಿದ್ದಾರೆ.

ಜತೆಗೆ, ಪಕ್ಷದಿಂದ ಗೆಲುವು ಪಡೆದ ಮುಖಂಡರಿಗೆ ಶುಭಕೋರಿರುವ ಶಾ, ಬಿಜೆಪಿ ಹಾಗೂ ಕಾರ್ಯಕರ್ತರ ಸಾಂಘಿಕ ಕಠಿಣ ಪರಿಶ್ರಮ ಹಾಗೂ ತೊಡಗಿಸಿಕೊಳ್ಳುವಿಕೆಯಿಂದ ಐತಿಹಾಸಿಕ ಗೆಲುವು ಲಭಿಸಿದೆ ಎಂದು ಅವರು ಮತ್ತೊಂದು ಟ್ವೀಟ್‌ ಮಾಡಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ, ಬಿಜೆಪಿ ಮಿತ್ರಪಕ್ಷಗಳು 42 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಸಿಪಿಐಎಂ ಮಿತ್ರಪಕ್ಷಗಳು 18 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಕಾಂಗ್ರೆಸ್ ಖಾತೆ ತೆರೆದಿಲ್ಲ. ಧನ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಮುಖ್ಯಮಂತ್ರಿ ಮಾಣಿಕ್‌ ಸರ್ಕಾರ್ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry