ಮೇಘಾಲಯದಲ್ಲಿ ಎನ್‌ಪಿಪಿ ಸರ್ಕಾರ ರಚಿಸಲಿದೆ: ಸಂಗ್ಮಾ

ಗುರುವಾರ , ಮಾರ್ಚ್ 21, 2019
30 °C

ಮೇಘಾಲಯದಲ್ಲಿ ಎನ್‌ಪಿಪಿ ಸರ್ಕಾರ ರಚಿಸಲಿದೆ: ಸಂಗ್ಮಾ

Published:
Updated:
ಮೇಘಾಲಯದಲ್ಲಿ ಎನ್‌ಪಿಪಿ ಸರ್ಕಾರ ರಚಿಸಲಿದೆ: ಸಂಗ್ಮಾ

ಶಿಲ್ಲಾಂಗ್‌: ಮೇಘಾಲಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು ನ್ಯಾಷನಲ್‌ ಪಿಪಲ್‌ ಪಾರ್ಟಿ (ಎನ್‌ಪಿಪಿ)ಯು ಬಿಜೆಪಿ ಸೇರಿದಂತೆ ಇತರೆ ಸಮಾನ ಮನಸ್ಕ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸಲಿದೆ ಎಂದು ಎನ್‌ಪಿಪಿ ಪಕ್ಷದ ವರಿಷ್ಠ ಸಿ.ಸಂಗ್ಮಾ ತಿಳಿಸಿದ್ದಾರೆ.

ಮೇಘಾಲಯದ ಜನ ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸಿದ್ದಾರೆ. ಸಮಾನ ಮನಸ್ಕ ಪಕ್ಷಗಳ ಜೊತೆ ಸೇರಿ ಸರ್ಕಾರ ರಚಿಸುವುದಾಗಿ ಅವರು ತಿಳಿಸಿದ್ದಾರೆ.

ಕಾಂಗ್ರೆಸ್ 22 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ನಿಚ್ಚಳ ಬಹುಮತ ಪಡೆಯುವುದು ಸಾಧ್ಯವಿಲ್ಲ, ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರ ಇಡುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಸಂಗ್ಮಾ ಹೇಳಿದ್ದಾರೆ.

ಎನ್‌ಪಿಪಿ 18, ಯುಡಿಪಿ 9 ಮತ್ತು ಬಿಜೆಪಿ 6 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದು ಕೊಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry