ಬನ್ನಿ ಪುಟಾಣಿ ಮಕ್ಕಳೆ

ಭಾನುವಾರ, ಮಾರ್ಚ್ 24, 2019
27 °C

ಬನ್ನಿ ಪುಟಾಣಿ ಮಕ್ಕಳೆ

Published:
Updated:
ಬನ್ನಿ ಪುಟಾಣಿ ಮಕ್ಕಳೆ

ಬನ್ನಿ ಪುಟಾಣಿ ಮಕ್ಕಳೆ ಅಳುತ ಆನೆಮರಿ

ಬಂದಿದೆ,

ಕೆಳೆದು ಹೋದ ಅಮ್ಮ ತನ್ನ ಜೊತೆಗಿಲ್ಲ

ಎಂದು ಬಿಕ್ಕಿ ಬಿಕ್ಕಿ ಅಳುತಿದೆ.

ಬನ್ನಿ ಪುಟಾಣಿ ಮಕ್ಕಳೆ ಅಲ್ಲಿ ನೋಡಿ ಮರಿಯನು,?

ಪಾಪ ಸೋತು ನೋವಿನಿಂದ‌

ಸುತ್ತ ಮುತ್ತ ನೋಡ್ತಿದೆ.

ಬನ್ನಿ ಪುಟಾಣಿ ಮಕ್ಕಳೆ ಪಾಪ ಒಂಟಿ

ಮರಿ ಅದು,

ಅಮ್ಮ ಎಲ್ಲಿ ಗೆಳೆಯರೆಲ್ಲಿ ಬಂಧುವೆಲ್ಲಿ

ಎಂದು ಕೂಗಿ ಕೂಗಿ ಅಳುತಿದೆ.

ಬನ್ನಿ ಪುಟಾಣಿ ಮಕ್ಕಳೆ ನೋಡಿ ಆನೆ ಮರಿ

ಮಲಗಿದೆ,

ಹತ್ತಿರ ಹೋಗುವ ಗಳಿಗೆಯಲ್ಲಿ

ಹಸಿವು ಹಸಿವು ಎಂದು ಸತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry