ವಿಜ್ಞಾನದ ಭೋಜನ

ಮಂಗಳವಾರ, ಮಾರ್ಚ್ 26, 2019
33 °C

ವಿಜ್ಞಾನದ ಭೋಜನ

Published:
Updated:
ವಿಜ್ಞಾನದ ಭೋಜನ

ಸೋಮವಾರ ನನ್ನ ಉಪಹಾರ ಚಿತ್ರಾನ್ನ

ಶಾಲೆಯಲ್ಲಿ ಕಲಿತದ್ದು ವರ್ಣವಿಭಜನೆಯನ್ನ

ಮಂಗಳವಾರ ತಿಂದಿದ್ದು  ಗರಿಗರಿ ದೋಸೆನ

ಶಾಲೆಯಲ್ಲಿ ನಾ ತಿಳಿದಿದ್ದು ಗಾಳಿಯ ಗುಣವನ್ನ

ಬುಧವಾರ ನಾ ಸವಿದದ್ದು ಬಿಸಿಬೇಳೆ ಬಾತನ್ನ

ಶಾಲೆಯಲ್ಲಿ  ಅರಿತಿದ್ದು ದ್ವಿದಳ ಧಾನ್ಯಗಳನ್ನ

ಗುರುವಾರ ನಾ ಸೇವಿಸಿದ್ದು ಇಡ್ಲಿ ವಡೆಯನ್ನ

ಶಾಲೆಯಲ್ಲಿ ಅಭ್ಯಸಿಸಿದ್ದು ಹುದುಗುವಿಕೆಯನ್ನ

ಶುಕ್ರವಾರ ನಾ ಭುಂಜಿಸಿದ್ದು ಕೇಸರಿಬಾತನ್ನ

ಶಾಲೆಯಲ್ಲಿ ಚಿತ್ರ ಬಿಡಿಸಿದ್ದು ಪುಂಕೇಸರವನ್ನ

ಶನಿವಾರ ಮುಂಜಾನೆ ಮನೆಯಲ್ಲಿ ಕುಡಿದೆ ಚಹವನ್ನ

ಪುಟ್ಟ ವಿರಾಮದಿ ಪೋಣಿಸಿದೆ ಶಾಲೆಯ ಪಲಾವನ್ನ

ಭಾನುವಾರದ ರಜೆಯಲಿ ಸವಿದೆ ಬಗೆ ಬಗೆ ಭೋಜನ

ಊಟದ ಜೊತೆಗೆ ಪಾಠವ ಹೋಲಿಸಿ ಕಲಿತೆ ವಿಜ್ಞಾನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry