ರಾಜ್ಯದಲ್ಲಿ ಭಯೋತ್ಪಾದಕ ಸರ್ಕಾರ: ಡಿವಿಎಸ್‌

ಗುರುವಾರ , ಮಾರ್ಚ್ 21, 2019
32 °C

ರಾಜ್ಯದಲ್ಲಿ ಭಯೋತ್ಪಾದಕ ಸರ್ಕಾರ: ಡಿವಿಎಸ್‌

Published:
Updated:
ರಾಜ್ಯದಲ್ಲಿ ಭಯೋತ್ಪಾದಕ ಸರ್ಕಾರ: ಡಿವಿಎಸ್‌

ಕುಶಾಲನಗರ (ಕೊಡಗು ಜಿಲ್ಲೆ): ‘ರಾಜ್ಯದಲ್ಲಿರುವುದು ಭಯೋತ್ಪಾದಕ ಸರ್ಕಾರ. ಹಿಂದೆ ಜೈಲುಗಳಲ್ಲಿ ನಡೆಯುತ್ತಿದ್ದ ಹತ್ಯೆಗಳು ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಬೀದಿಗಳಲ್ಲಿ ನಡೆಯುವಂತೆ ಆಗಿದೆ’ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಶನಿವಾರ ಆರೋಪಿಸಿದರು.

ಜನ ಸುರಕ್ಷಾ ಯಾತ್ರೆ ಹೆಸರಿನಲ್ಲಿ ಕೈಗೊಂಡಿರುವ ‘ಮಂಗಳೂರು ಚಲೊ’ಗೆ ಚಾಲನೆ ನೀಡಿ ಮಾತನಾಡಿದದ ಅವರು, ‘ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಮುಖಂಡರ ಹತ್ಯೆಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಕಾಂಗ್ರೆಸ್ ನಾಯಕರು ಗೂಂಡಾಗಳಾಗಿ ಪರಿವರ್ತನೆ ಆಗಿದ್ದಾರೆ. ಕರಾವಳಿ ಭಾಗವು ಭಯೋತ್ಪಾದನಾ ಕೇಂದ್ರವಾಗಿದೆ. ಇದಕ್ಕೆಲ್ಲಾ ರಾಜ್ಯ ಸರ್ಕಾರವೇ ಕಾರಣ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ ಅವರ ಕೈಗೆ ಗೃಹ ಇಲಾಖೆ ನೀಡಿರುವುದೇ ಕಾನೂನು ಸುವ್ಯವಸ್ಥೆ ಹಾಳಾ

ಗಲು ಕಾರಣ’ ಎಂದು ಆಪಾದಿಸಿದರು.

ಪಾದಯಾತ್ರೆ: ಇಲ್ಲಿನ ಬಿ.ಎಂ ರಸ್ತೆಯಲ್ಲಿ ಯಾತ್ರೆಗೆ ಹಸಿರು ನಿಶಾನೆ ತೋರಲಾಯಿತು. ಬಳಿಕ ಗುಡ್ಡೆಹೊಸೂರು ತನಕ ಪಾದಯಾತ್ರೆ ನಡೆಯಿತು. ಸಂಸದರಾದ ಪ್ರತಾಪ್‌ ಸಿಂಹ, ನಳೀನ್‌ ಕುಮಾರ್ ಕಟೀಲ್‌, ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ. ಭಾರತೀಶ್ ಪಾಲ್ಗೊಂಡಿದ್ದರು.

ಸಂಜೆ ಮಡಿಕೇರಿಯಲ್ಲಿ ಬಹಿರಂಗ ಸಮಾವೇಶ ಹಾಗೂ ಪಾದಯಾತ್ರೆ ನಡೆಯಿತು. ಬಳಿಕ ಯಾತ್ರೆಯು ಸುಳ್ಯ ಮಾರ್ಗವಾಗಿ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಿತು.

ಕ್ಷೇತ್ರ ಬಿಟ್ಟು ಬನ್ನಿ: ಸಿ.ಎಂಗೆ ಸವಾಲು

ಅಂಕೋಲಾ (ಉತ್ತರ ಕನ್ನಡ ಜಿಲ್ಲೆ): ‘ಸಿದ್ದರಾಮಯ್ಯನವರೇ, ಚಾಮುಂಡಮ್ಮನ ಹಿಂದೆ ಯಾಕೆ ಅಡಗಿ ಕೂರ್ತೀರಿ? ಬನ್ನಿ ಅಂಕೋಲಾ, ಶಿರಸಿಗೆ. ನಿಮಗೆ ನಾವು ಉತ್ತರ ಕೊಡುತ್ತೇವೆ’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸವಾಲು ಹಾಕಿದರು.

ಬಿಜೆಪಿ ಶನಿವಾರ ಹಮ್ಮಿಕೊಂಡಿದ್ದ ಜನ ಸುರಕ್ಷಾ ಯಾತ್ರೆಯಲ್ಲಿ ಅವರು ಮಾತನಾಡಿದರು.

‘ಬಿಜೆಪಿಯ ಜನ ಸುರಕ್ಷಾ ಯಾತ್ರೆ ಇದೇ 6ರಂದು ಮಂಗಳೂರಿನಲ್ಲಿ ಮುಗಿಯಲಿದೆ. ಆದರೆ, ಸಿದ್ದು ಸರ್ಕಾರದ ವಿಸರ್ಜನಾ ಹೋಮ ನಿರಂತರವಾಗಿ ನಡೆಯಲಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry