ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಜೋತ್ ತವರಿನಲ್ಲಿ ಸಂಭ್ರಮ

Last Updated 3 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಚಂಡೀಗಡ: ಏಷ್ಯನ್ ಸೀನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಚಿನ್ನ ಗೆದ್ದುಕೊಂಡಿದ್ದ ನವಜೋತ್ ಕೌರ್ ಅವರ ತವರು ತರನ್ ತರನ್‌ನಲ್ಲಿ ಸಂಭ್ರಮ ಮನೆಮಾಡಿತ್ತು.

ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ನವಜೋತ್‌ ಮಹಿಳೆಯರ 65ಕೆ.ಜಿ ವಿಭಾಗದ ಫೈನಲ್‌ನಲ್ಲಿ ಜಪಾನ್‌ನ ಮಿಯಾ ಇಯಾಮ್‌ ಅವರನ್ನು ಮಣಿಸಿದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು.

ನವಜೋತ್ ಅವರು ಪಂಜಾಬ್‌ನ ತರನ್ ತರನ್ ಜಿಲ್ಲೆಯ ಬಘರಿಯಾ ಗ್ರಾಮದವರು. ಇಲ್ಲಿ ಸೇರಿದ್ದ ಅವರ ಕುಟುಂಬದ ಸದಸ್ಯರು ಸಿಹಿ ಹಂಚಿ ಸಂಭ್ರಮ ಆಚರಿಸಿದರು.

‘ನವಜೋತ್ ಚಿನ್ನ ಗೆಲ್ಲುವುದಕ್ಕಾಗಿ ನಾವು ಪ್ರಾರ್ಥಿಸಿದ್ದೆವು. ಜಪಾನ್‌ನ ಆಟಗಾರ್ತಿ ಎದುರು ಫೈನಲ್‌ನಲ್ಲಿ ಆಡುತ್ತಿದ್ದ ವೇಳೆ   ಕುತೂಹಲಗೊಂಡಿದ್ದೆವು’ ಎಂದು ಅವರ ಸಹೋದರಿ ಹಾಗೂ ಕುಸ್ತಿಪಟು ಕೂಡ ಆಗಿರುವ ನವಜೀತ್ ಹೇಳಿದ್ದಾರೆ.

ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್ ಸಿಂಗ್‌ ಅವರು ನವಜೋತ್ ಅವರಿಗೆ ಶುಭಾಷಯ ಕೋರಿದ್ದಾರೆ. ‘ಪಂಜಾಬ್ ಹಾಗೂ ಭಾರತಕ್ಕೆ ಗೌರವ ತಂದ ನವಜೋತ್ ಅವರಿಗೆ ಅಭಿನಂದನೆಗಳು. ನಿಮ್ಮ ಭವಿಷ್ಯ ಉಜ್ವಲವಾಗಿರಲಿ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT