ಲಿಯಾಂಡರ್‌ ಪೇಸ್‌ಗೆ ಸೋಲು

7

ಲಿಯಾಂಡರ್‌ ಪೇಸ್‌ಗೆ ಸೋಲು

Published:
Updated:
ಲಿಯಾಂಡರ್‌ ಪೇಸ್‌ಗೆ ಸೋಲು

ದುಬೈ: ಭಾರತದ ಹಿರಿಯ ಆಟಗಾರ ಲಿಯಾಂಡರ್ ಪೇಸ್‌ ದುಬೈ ಡ್ಯೂಟಿ ಫ್ರೀ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಸೋತಿದ್ದಾರೆ.

ಎಟಿಪಿ ಸರಣಿಯ 97ನೇ ಫೈನಲ್‌ ಪಂದ್ಯವನ್ನು ಪೇಸ್ ಆಡಿದರು.

ಪುರುಷರ ಡಬಲ್ಸ್‌ ವಿಭಾಗದ ಪೈಪೋಟಿಯಲ್ಲಿ ಪೇಸ್‌ ಹಾಗೂ ಅಮೆರಿಕದ ಜೆಮಿ ಸೆರೆಟನಿ ಜೋಡಿ 2–6, 6–7ರಲ್ಲಿ ನೆದರ್ಲೆಂಡ್ಸ್‌ನ ಜೀನ್‌ ಜುಲಿಯನ್‌ ಹಾಗೂ ರುಮೇನಿಯಾದ ಹೊರಿಯಾ ಟೆಕಾವ್ ಎದುರು ಸೋತಿತು.

ಜೀನ್‌ ಹಾಗೂ ಹೊರಿಯಾ ಜೋಡಿ ಗೆದ್ದ 17ನೇ ಎಟಿಪಿ ಪ್ರಶಸ್ತಿ ಇದಾಗಿದೆ. ಭಾರತದ ಪೇಸ್‌ ವಿಶ್ವ ರ‍್ಯಾಂಕಿಂಗ್‌ನಲ್ಲಿ 52ನೇ ಸ್ಥಾನ ಹೊಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry