ಬ್ಯಾಸ್ಕೆಟ್‌ಬಾಲ್‌: ಸುರಾನಾ ಕಾಲೇಜು ತಂಡಕ್ಕೆ ಕಿರೀಟ

7

ಬ್ಯಾಸ್ಕೆಟ್‌ಬಾಲ್‌: ಸುರಾನಾ ಕಾಲೇಜು ತಂಡಕ್ಕೆ ಕಿರೀಟ

Published:
Updated:
ಬ್ಯಾಸ್ಕೆಟ್‌ಬಾಲ್‌: ಸುರಾನಾ ಕಾಲೇಜು ತಂಡಕ್ಕೆ ಕಿರೀಟ

ಬೆಂಗಳೂರು: ಉತ್ತಮ ಆಟದ ಮೂಲಕ ಗಮನ ಸೆಳೆದ ಸುರಾನಾ ಕಾಲೇಜು ತಂಡ ಬೆಂಗಳೂರು ವಿಶ್ವವಿದ್ಯಾಲಯ ವತಿಯ ಅಂತರ ಕಾಲೇಜುಗಳ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಶನಿವಾರ ಚಾಂಪಿಯನ್ ಆಗಿದೆ.

ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ನಡೆದ ಟೂರ್ನಿಯಲ್ಲಿ ಸುರಾನಾ ಕಾಲೇಜಿನ ಬಾಲಕರ ತಂಡ ಆಡಿದ ಮೂರೂ ಪಂದ್ಯಗಳನ್ನು ಗೆದ್ದುಕೊಂಡಿತು. ವಿಜಯೀ ತಂಡ 63–33ರಲ್ಲಿ ಸಿಎಮ್‌ಆರ್‌ಐಎಮ್‌ಎಸ್‌ ವಿರುದ್ಧವೂ, 75–65ರಲ್ಲಿ ಸಿಂಧಿ ಕಾಲೇಜು ಮೇಲೂ, ಅಂತಿಮ ಪಂದ್ಯದಲ್ಲಿ 56–44ರಲ್ಲಿ ಎಸ್‌ಜೆಸಿಸಿ ಎದುರೂ ಗೆದ್ದಿತು.

ಎಸ್‌ಜೆಸಿಸಿ ತಂಡ ಎರಡನೇ ಸ್ಥಾನ ಪಡೆದರೆ ಸಿಂಧಿ ಕಾಲೇಜು ಹಾಗೂ ಸಿಎಮ್‌ಆರ್‌ಐಎಮ್‌ಎಸ್‌ ಕಾಲೇಜು ತಂಡಗಳು ನಂತರದ ಸ್ಥಾನ ಗಳಿಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry