ಅನುದಾನ ಘೋಷಣೆ ಇಲ್ಲ: ಪುದುಚೆರಿ ಮುಖ್ಯಮಂತ್ರಿ ಬೇಸರ

7

ಅನುದಾನ ಘೋಷಣೆ ಇಲ್ಲ: ಪುದುಚೆರಿ ಮುಖ್ಯಮಂತ್ರಿ ಬೇಸರ

Published:
Updated:
ಅನುದಾನ ಘೋಷಣೆ ಇಲ್ಲ: ಪುದುಚೆರಿ ಮುಖ್ಯಮಂತ್ರಿ ಬೇಸರ

ಪುದುಚೆರಿ: ಕೇಂದ್ರಾಡಳಿತ ಪ್ರದೇಶ ಪುದುಚೆರಿಗೆ ಯಾರೇ ಪ್ರಧಾನಿ ಭೇಟಿ ನೀಡಿದರೂ, ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಘೊಷಿಸುತ್ತಾರೆ ಆದರೆ ಪ್ರಧಾನಿ ಮೋದಿ ಫೆಬ್ರುವರಿ 25ರಂದು ಪುದುಚೆರಿಗೆ ಭೇಟಿ ನೀಡಿದ ವೇಳೆ ಯಾವುದೇ ಅನುದಾನವನ್ನು ಘೋಷಿಸದೆ ಇರುವುದು ಬೇಸರ ತಂದಿದೆ ಎಂದು ಪುದುಚೆರಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಹೇಳಿದ್ದಾರೆ.

ಪುದುಚೆರಿ ಪ್ರಾದೇಶಿಕ ಸರ್ಕಾರದ ಕಷ್ಟ ಹಾಗೂ ಬೇಡಿಕೆಗಳ ವಿವರ ಇರುವ ದಾಖಲೆಯನ್ನು ನೀಡಿದ್ದೇವೆ. ಕಾವೇರಿ ನದಿ ನೀರು ಹಂಚಿಕೆ ಕುರಿತಾಗಿ, ಸುಪ್ರೀಂ ಕೋರ್ಟ್‌ ನಿರ್ದೇಶನದ ಪ್ರಕಾರ ಕಾವೇರಿ ಜಲ ನಿರ್ವಹಣಾ ಮಂಡಳಿಯನ್ನು ರಚಿಸಲು ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದ್ದೇವೆ, ಈ ಬಗ್ಗೆ ಪುದುಚೆರಿ ಸರ್ಕಾರಕ್ಕೆ ಸಹಾಯ ಮಾಡುವುದಾಗಿ ಮೋದಿ ಭರವಸೆ ನೀಡಿದ್ದಾರೆ.

ಫೆಬ್ರುವರಿ 25ರಂದು ಅರೋವಿಲ್ ಅಂತರರಾಷ್ಟ್ರೀಯ ಕಾರ್ಯಕ್ರಮದ ಜಾಥಾದಲ್ಲಿ ಭಾಗವಹಿಸಲು ಪುದುಚೆರಿಗೆ ಮೋದಿ ಭೇಟಿ ನೀಡಿದ್ದರು.

ಕಾರ್ತಿಕ್ ಚಿದಂಬರಂ ಬಂಧನ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಮೋದಿ, ಇದೊಂದು ರಾಜಕೀಯ ಪ್ರೇರಿತ ಕೃತ್ಯ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry