ಮಹಿಳಾ ನವೋದ್ಯಮಕ್ಕೆ ₹50 ಲಕ್ಷ

ಮಂಗಳವಾರ, ಮಾರ್ಚ್ 26, 2019
33 °C

ಮಹಿಳಾ ನವೋದ್ಯಮಕ್ಕೆ ₹50 ಲಕ್ಷ

Published:
Updated:
ಮಹಿಳಾ ನವೋದ್ಯಮಕ್ಕೆ ₹50 ಲಕ್ಷ

ಬೆಂಗಳೂರು: 'ಮಹಿಳಾ ಉದ್ಯಮಿ ಗಳಿಗಾಗಿ 'ಐಡಿಯಾ 2 ಪಿಒಸಿ' (ಫ್ರೂಫ್‌ ಆಫ್‌ ಕಾನ್ಸೆಪ್ಟ್‌) ಯೋಜನೆಯಡಿ ₹10 ಕೋಟಿ ಮೀಸಲಿಡಲಾಗಿದೆ. ಇದರಲ್ಲಿ ತಂತ್ರಜ್ಞಾನ ಆಧರಿತ ನವೋದ್ಯಮ ಆರಂಭಿಸುವ ಮಹಿಳೆಯರಿಗೆ ₹50 ಲಕ್ಷದವರೆಗೂ ಆರ್ಥಿಕ ನೆರವು ನೀಡಲಾಗುವುದು' ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.

ಕರ್ನಾಟಕ ಕೈಗಾರಿಕಾ ಪ್ರದೇಶಾ ಭಿವೃದ್ಧಿ ಮಂಡಳಿ ನಗರದಲ್ಲಿ ಆಯೋಜಿಸಿದ್ದ ‘ಮಹಿಳಾ ಸಾಮರ್ಥ್ಯ ಮತ್ತು ಮೌಲ್ಯ’ (ವುಮನ್‌ ಆಫ್‌ ವರ್ತ್‌) ಕುರಿತ ಸಮಾವೇಶದ ಸಮಾರೋಪದಲ್ಲಿ ಶನಿವಾರ ಮಹಿಳಾ ಉದ್ಯಮಿಗಳೊಂ

ದಿಗೆ ಅವರು ಸಂವಾದ ನಡೆಸಿದರು.

‘ಮಹಿಳಾ ಉದ್ಯಮಿಗಳಿಗೆ ಅತೀ ಹೆಚ್ಚು ಉತ್ತೇಜನ ನೀಡುವುದರಲ್ಲಿ ರಾಜ್ಯ ಸರ್ಕಾರ ಮುಂದಿದೆ. ಅತೀ ಹೆಚ್ಚು ಮಹಿಳಾ ಉದ್ಯಮಿಗಳಿರುವ ರಾಜ್ಯಗಳಲ್ಲಿ ನಮ್ಮ ರಾಜ್ಯ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ’ ಎಂದರು.

‘ಜೈವಿಕ ತಂತ್ರಜ್ಞಾನ ಕ್ಷೇತ್ರದ 32 ನವೋದ್ಯಮಗಳ ಪೈಕಿ 27 ನವೋದ್ಯಮಗಳನ್ನು ಮಹಿಳೆಯರೇ ಆರಂಭಿಸಿದ್ದಾರೆ. ಮಹಿಳೆಯರಿ ಗಾಗಿಯೇ ಪ್ರತ್ಯೇಕ ಕೈಗಾರಿಕಾ ಪಾರ್ಕ್‌ ಆರಂಭಿಸಿದ್ದೇವೆ. ವಿಶಾಖಾ ಪ್ರಕರಣದ ತೀರ್ಪಿನ ನಂತರ ಉದ್ಯೋಗದ ಸ್ಥಳದಲ್ಲಿ ಮತ್ತು ಮಹಿಳೆಯರು ಒಂಟಿಯಾಗಿ ಪ್ರವಾಸ ಮಾಡುವ ಸ್ಥಳಗಳಲ್ಲೂ ಸುರಕ್ಷತಾ ಕ್ರಮ ಕೈಗೊಂಡಿದ್ದೇವೆ. ಜನಶ್ರೀ ಯೋಜನೆಯಡಿ ಗ್ರಾಮೀಣಾ ಮಹಿಳೆಯರಿಗೂ ಪೌಷ್ಠಿಕ ಆಹಾರ ಮತ್ತು ಆರೋಗ್ಯ ಸೇವೆ ಒದಗಿಸುತ್ತಿದ್ದೇವೆ. ತೃತೀಯ ಲಿಂಗಿಗಳನ್ನು ಗುರುತಿಸಿ ಅವರಿಗೂ ಸೌಲಭ್ಯ ನೀಡುತ್ತಿರುವ ಏಕೈಕ ಸರ್ಕಾರ ನಮ್ಮದು’ ಎಂದರು.

‘ಪ್ರವಾಸೋದ್ಯಮಕ್ಕೂ ರಾಜ್ಯ ಅತ್ಯಂತ ಸುರಕ್ಷಿತ ತಾಣವಾಗಿದೆ. ಒಂಟಿಯಾಗಿ ಪ್ರವಾಸ ಕೈಗೊಳ್ಳುವ ಮಹಿಳೆಯರಿಗೆ ರಾಜ್ಯದ ವಸತಿ ಮತ್ತು ವಿಹಾರಧಾಮಗಳಲ್ಲಿ ಈಗಾಗಲೇ ಶೇ 25ರಷ್ಟು ರಿಯಾಯಿತಿ ನೀಡಿದ್ದೇವೆ. ರಾಜ್ಯದಲ್ಲಿರುವ ಪ್ರಮುಖ 11 ಚಾರಣ ತಾಣಗಳಿಗೆ ಭೇಟಿ ನೀಡುತ್ತಿರುವವ

ರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ’ ಎಂದರು.

ಟಿಟಿಸಿ ಕಂಪನಿಯ ಪೂರ್ಣಿಮಾ ಕತ್ಯಾಲ್‌ ಸಂವಾದ ನಿರ್ವಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry