ಇಂದು ಸಾಧನೆಯ ಸಂಭ್ರಮ

6

ಇಂದು ಸಾಧನೆಯ ಸಂಭ್ರಮ

Published:
Updated:

ಬೆಂಗಳೂರು: ಯಶವಂತಪುರ ಶಾಸಕ ಎಸ್‌.ಟಿ. ಸೋಮಶೇಖರ್‌ ಅವರ ಸಾಧನೆಯ ಸಂಭ್ರಮ, ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಭಾನುವಾರ ನಡೆಯಲಿದೆ.

6,500 ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ, ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿಕೊಂಡಿರುವ 2,450 ಫಲಾನುಭವಿಗಳಿಗೆ ಕ್ರಯಪತ್ರ ಹಾಗೂ ಖಾತಾಪತ್ರ ವಿತರಣೆ, 94 ಸಿಸಿ ಅಡಿಯಲ್ಲಿ 1,853 ಜನರಿಗೆ ಮನೆ ಮಂಜೂರಾತಿ ಪತ್ರ, ಕೊಳೆಗೇರಿ ಅಭಿವೃದ್ಧಿ ನಿಗಮದಿಂದ 360 ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸು ವರು ಎಂದು ಸೋಮಶೇಖರ್ ಸುದ್ದಿಗಾರರಿಗೆ ತಿಳಿಸಿದರು.

ಹೇರೋಹಳ್ಳಿ ವಾರ್ಡ್‌ ವ್ಯಾಪ್ತಿಯಲ್ಲಿ ಕಾವೇರಿ ನೀರಿನ ಸಂಪರ್ಕಕ್ಕೆ ಚಾಲನೆ ನೀಡಲಿದ್ದು ಇದೇ ಸಂದರ್ಭ ದಲ್ಲಿ ಉಲ್ಲಾಳು ಮತ್ತು ಹೆಮ್ಮಿಗೆ

ಪುರ ವಾರ್ಡ್‌ನ ಹಲವು ಬಡಾವಣೆಗಳಿಗೆ ನೀರು ಸಂಪರ್ಕ ಯೋಜನೆಯನ್ನು ಉದ್ಘಾಟಿಸುವರು. ಬ್ಯಾಡರಹಳ್ಳಿಯಿಂದ ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ ಮೂಲಕ ಮೈಸೂರು ರಸ್ತೆಯ ವರೆಗೆ ಕೈಗೊಂಡಿರುವ ನಾಲ್ಕು ಪಥದ ರಸ್ತೆಗೆ ಶಂಕುಸ್ಥಾಪನೆ, ಬಿಇಎಲ್ ಬಡಾವಣೆಯಲ್ಲಿ ಪದವಿಪೂರ್ವ ಕಾಲೇಜು ಕಟ್ಟಡದ ಉದ್ಘಾಟನೆಯೂ ನಡೆಯಲಿದೆ.

ಬನಶಂಕರಿ 6ನೇ ಹಂತದ ವ್ಯಾಪ್ತಿಯಲ್ಲಿ ಒಳಚರಂಡಿ ಹಾಗೂ ಡಾಂಬರೀ ಕರಣ ಕಾಮಗಾರಿಯನ್ನು ಉದ್ಘಾಟಿಸು ವರು. ಕಾರ್ಯಕ್ರಮದಲ್ಲಿ ಒಂದು ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದು ಬಿಬಿಎಂಪಿ ಸದಸ್ಯ ರಾಜಣ್ಣ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry