ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಕುಮಾರಿ ಕೊಲಿ ಪಾಕಿಸ್ತಾನದ ಮೊದಲ ಹಿಂದೂ ಸಂಸದೆ

Last Updated 4 ಮಾರ್ಚ್ 2018, 9:22 IST
ಅಕ್ಷರ ಗಾತ್ರ

ಲಾಹೋರ್‌ (ಪಿಟಿಐ): ದಲಿತ ಸಮುದಾಯಕ್ಕೆ ಸೇರಿದ ಕೃಷ್ಣಕುಮಾರಿ ಕೊಲಿ ಅವರು ಪಾಕಿಸ್ತಾನ ಸಂಸತ್ತಿನ ಮೇಲ್ಮನೆ ಸದಸ್ಯ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ (ಪಿಪಿಪಿ) ಕೃಷ್ಣಕುಮಾರಿ ಕೊಲಿ ಅವರನ್ನು ಆಯ್ಕೆ ಮಾಡಿ ಕಳುಹಿಸಿದೆ. ಅವರ ನೇಮಕ ಪಾಕಿಸ್ತಾನ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ.

ಸಿಂಧ್‌ ಪ್ರಾಂತ್ಯದ ಥಾರ್‌ ಪ್ರದೇಶಕ್ಕೆ ಸೇರಿದ 39 ವರ್ಷದ ಕೊಲಿ ಅವರು ಮಾರ್ಚ್‌ 3ರಂದು ನಡೆದ ಚುನಾವಣೆಯಲ್ಲಿ ಜಯಗಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

’ಹಿಂದೂ ಮಹಿಳೆಯೊಬ್ಬರು ಪಾಕಿಸ್ತಾನದ ಸಂಸದರಾಗಿ ಆಯ್ಕೆಯಾಗುತ್ತಿರುವುದು ಇದೇ ಮೊದಲು. 2009ರಲ್ಲಿ ಡಾ. ಖತುಮಾಲ್‌ ಜೀವನ್‌ ಹಾಗೂ 2015ರಲ್ಲಿ ಗಯಾನ್‌ಚಾಂದ್‌ ಅವರನ್ನು ಸಂಸದರಾಗಿ ಪಿಪಿಪಿ ಆಯ್ಕೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT