ನಗರಸಭೆ: ₹ 51ಲಕ್ಷ ಉಳಿತಾಯ ಬಜೆಟ್

7
ವಿವಿಧ ಮೂಲಗಳಿಂದ ₹ 27.40 ಕೋಟಿ ಆದಾಯ ಸಂಗ್ರಹ ಗುರಿ

ನಗರಸಭೆ: ₹ 51ಲಕ್ಷ ಉಳಿತಾಯ ಬಜೆಟ್

Published:
Updated:
ನಗರಸಭೆ: ₹ 51ಲಕ್ಷ ಉಳಿತಾಯ ಬಜೆಟ್

ಚಾಮರಾಜನಗರ: ಚಾಮರಾಜನಗರ ನಗರಸಭೆಯ 2017–18ನೇ ಸಾಲಿನ ಪರಿಷ್ಕೃತ ಮತ್ತು 2018–19ನೇ ಸಾಲಿಗೆ ಅಂದಾಜು ₹ 51 ಲಕ್ಷ ಉಳಿತಾಯ ಬಜೆಟ್‌ಅನ್ನು ನಗರಸಭೆ ಅಧ್ಯಕ್ಷೆ ಶೋಭಾ ಶನಿವಾರ ಮಂಡಿಸಿದರು.

₹ 21.32 ಕೋಟಿ ಪ್ರಾರಂಭಿಕ ಶಿಲ್ಕು ಇದ್ದು, ನಗರಸಭೆಯ ಸ್ವಂತ ಮೂಲಗಳಿಂದ ಹಾಗೂ ಸರ್ಕಾರಗಳ ಅನುದಾನದಿಂದ ₹ 48.72 ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ. ₹ 48.21 ಕೋಟಿ ವಿವಿಧ ಕಾರ್ಯಗಳಿಗೆ ವ್ಯಯಿಸಲು ಉದ್ದೇಶಿಸಲಾಗಿದೆ. ₹ 50.96 ಲಕ್ಷ ಉಳಿತಾಯದ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.

ಆದಾಯದ ಮೂಲ: ಆಸ್ತಿ ತೆರಿಗೆ ದಂಡದಿಂದ ₹ 60 ಲಕ್ಷ, ಘನ ತ್ಯಾಜ್ಯವಸ್ತು ನಿರ್ವಹಣೆ ಕರ ₹32 ಲಕ್ಷ, ನೀರು ಸರಬರಾಜು ಶುಲ್ಕ ₹ 84 ಲಕ್ಷ, ಕಟ್ಟಡ ಪರವಾನಗಿ ₹ 42 ಲಕ್ಷ, ಬ್ಯಾಂಕ್‌ ಖಾತೆಗಳ ಮೇಲಿನ ಠೇವಣಿ ₹ 35.10 ಲಕ್ಷ, ಹರಾಜು, ದಂಡ ಮುಂತಾದ ಮೂಲಗಳಿಂದ ₹ 99 ಲಕ್ಷ ಆದಾಯ ನಿರೀಕ್ಷೆ ಮಾಡಲಾಗಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ₹ 2.75 ಕೋಟಿ ಅನುದಾನವನ್ನು ವೇತನಕ್ಕಾಗಿ, ₹ 3.40 ಕೋಟಿ ಎಸ್‌ಎಫ್‌ಸಿ ಮುಕ್ತನಿಧಿನಿಧಿಯ ಅನುದಾನ , ₹ 3.76 ಕೋಟಿ 14ನೇ ಹಣಕಾಸು ಯೋಜನೆಯ ಅನುದಾನ, ₹ 2.62 ಕೋಟಿ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆ ಅನುದಾನವನ್ನು ಪ್ರಮುಖವಾಗಿ ಆದಾಯದ ಮೂಲಗಳನ್ನಾಗಿ ಪರಿಗಣಿಸಲಾಗಿದೆ.

ವೆಚ್ಚ ಯಾವುದಕ್ಕೆ?: ಬೀದಿ ದೀಪ ಅಳವಡಿಕೆಗೆ ₹ 1.12 ಕೋಟಿ, ಘನತ್ಯಾಜ್ಯವಸ್ತು ವಿಲೇವಾರಿ ಘಟಕದ ಅಭಿವೃದ್ಧಿಗೆ ₹5.12 ಕೋಟಿ, ನೀರು ಸರಬರಾಜು ಕಾಮಗಾರಿಗೆ ₹ 4.89 ಕೋಟಿ, ಶೌಚಾಲಯಗಳ ನಿರ್ಮಾಣಕ್ಕೆ ₹ 2.96 ಕೋಟಿ, ವಿದ್ಯುತ್‌ ಬಿಲ್ ಪಾವತಿಗೆ ₹ 2.22 ಕೋಟಿ, ಉದ್ಯಾನ ಮತ್ತು ಸ್ಮಶಾನಗಳ ಅಭಿವೃದ್ಧಿಗೆ ₹ 2.23 ಕೋಟಿ, ನೌಕರರ ವೇತನಕ್ಕಾಗಿ ₹ 3.49 ಕೋಟಿ.

ವಿವಿಧ ಕಾರ್ಯಕ್ರಮಗಳು: ನಗರದ 35 ಕಾಯಂ ಪೌರಕಾರ್ಮಿಕರಿಗೆ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ₹ 2.62 ಕೋಟಿ ವೆಚ್ಚದಲ್ಲಿ ವಸತಿ ನಿರ್ಮಿಸುವುದು. ವೈಯಕ್ತಿಕ ಮತ್ತು ಸಮುದಾಯ ಶೌಚಾಲಯಗಳ ನಿರ್ಮಾಣಕ್ಕೆ ₹ 1.10 ಕೋಟಿ ನೆರವು ನೀಡುವುದು. ಜಿಲ್ಲಾಡಳಿತ ಭವನದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಗೋಪುರ, 13 ಮತ್ತು 14ನೇ ವಾರ್ಡ್‌ಗಳಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ, ಬುದ್ಧಭವನದ ಮುಂಭಾಗ ಬುದ್ಧನ ಪ್ರತಿಮೆ ನಿರ್ಮಾಣಕ್ಕೆ ₹ 50 ಲಕ್ಷ ಮೀಸಲಿರಿಸಲಾಗಿದೆ.

ಸಂತೇಮರಹಳ್ಳಿ ವೃತ್ತ, ಭುವನೇಶ್ವರಿ ವೃತ್ತ, ಗುಂಡ್ಲುಪೇಟೆ ವೃತ್ತಗಳಲ್ಲಿ ಪಾರಂಪರಿಕ ಅಲಂಕಾರಿಕ ದೀಪಗಳ ಅಳವಡಿಕೆಗೆ ₹ 1.12 ಕೋಟಿ. ಬೀದಿಬದಿ ವ್ಯಾಪಾರಿಗಳಿಗೆ ನಿರ್ದಿಷ್ಟ ಸ್ಥಳ ಗುರುತಿಸಿ ಮಾರುಕಟ್ಟೆ ವಲಯ ನಿರ್ಮಿಸುವುದು. ನಿರಾಶ್ರಿತರರಿಗೆ ಆಶ್ರಯ ಕಲ್ಪಿಸುವುದು, ನಿರುದ್ಯೋಗಿಗಳಿಗೆ ತರಬೇತಿ ನೀಡುವುದು. ರಸ್ತೆಗಳಲ್ಲಿ ನಾಮಫಲಕ ಅಳವಡಿಕೆ, ಪ್ರಮಖ ಸ್ಥಳ ಹಾಗೂ ವೃತ್ತಗಳಲ್ಲಿ ಟ್ರಾಫಿಕ್‌ ಸಿಗ್ನಲ್‌ ಲೈಟ್‌ ಮತ್ತು ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸುವುದು, ಚಾಮರಾಜೇಶ್ವರ ದೇವಸ್ಥಾನದ ಸುತ್ತ ಫುಟ್‌ಪಾತ್ ಇಂಟರ್‌ಲಾಕಿಂಗ್‌ ಕಾಮಗಾರಿ ಮತ್ತು ಗ್ರಿಲ್‌ ಅಳವಡಿಕೆ. ₹ 2.23 ಕೋಟಿ ವೆಚ್ಚದಲ್ಲಿ ಮಾದರಿ ಉದ್ಯಾನಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.

‘ಸಾಧನೆಯೇ ಇಲ್ಲ’: ‘ಪ್ರತಿಬಾರಿಯೂ ಇದೇ ರೀತಿ ಬಜೆಟ್‌ ಮಂಡಿಸಲಾಗುತ್ತಿದೆ. ಆದರೆ ಸಾಧನೆ ಮಾತ್ರ ಇಲ್ಲ. ವಾರ್ಡ್‌ಗಳಿಗೆ ಹೋಗಿ ನೋಡಿ. ಅವುಗಳ ಚಿತ್ರಣ ಗೊತ್ತಾಗುತ್ತದೆ. ಇಡೀ ಬಜೆಟ್‌ನಲ್ಲಿ ಒಂದೂ ವಿಶೇಷ ಕಾರ್ಯಕ್ರಮವಿಲ್ಲ. ಉದ್ಯಾನಗಳ ನಿರ್ಮಾಣ ಮಾಡುವುದಾಗಿ ಹೇಳಲಾಗಿದೆ. ಇರುವ ಉದ್ಯಾನಗಳನ್ನು ಮೊದಲು ಸರಿಪಡಿಸಿ. ಕಳೆದ ವರ್ಷವೂ ಉದ್ಯಾನ ನಿರ್ಮಾಣಕ್ಕೆ ₹ 25 ಲಕ್ಷ ಮಂಜೂರು ಮಾಡಲಾಗಿತ್ತು. ಆ ಹಣ ಎಲ್ಲಿ ಹೋಯಿತು ಎಂಬುದಕ್ಕೆ ಉತ್ತರವೇ ಸಿಗುತ್ತಿಲ್ಲ’ ಎಂದು ಸದಸ್ಯ ಆರ್.ಪಿ. ನಂಜುಂಡಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಉಪಾಧ್ಯಕ್ಷ ಆರ್. ರಾಜಪ್ಪ, ಪೌರಾಯುಕ್ತೆ ಬಿ. ಫೌಜಿಯಾ ತರುನ್ನುಂ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸತ್ಯಮೂರ್ತಿ ಇದ್ದರು.

***

ಇದು ಒಂದು ವರ್ಗವನ್ನು ಓಲೈಸುವ ಬಜೆಟ್‌. ಪುತ್ಥಳಿ ನಿರ್ಮಾಣಕ್ಕೆ ಅವಕಾಶವಿಲ್ಲ. ಆದರೂ ಬಜೆಟ್‌ನಲ್ಲಿ ಅಳವಡಿಸಲಾಗಿದೆ. ಕೊಡುವುದಾದರೆ ಎಲ್ಲ ಜನಾಂಗದವರಿಗೂ ಸಮಾನ ಪ್ರಾತಿನಿಧ್ಯ ಕೊಡಿ

– ನಾರಾಯಣಸ್ವಾಮಿ, ನಗರಸಭೆ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry