ಸ್ಥಳೀಯ ಭಾಷೆ ಬಗ್ಗೆ ಅಸಡ್ಡೆ, ಹಿಂದಿ ಹೇರಿಕೆಗೆ ಮುಂದಾಗಿರುವ ಕೇಂದ್ರ: ಎಸ್.ಜಿ.ಸಿದ್ದರಾಮಯ್ಯ ಆರೋಪ

ಬುಧವಾರ, ಮಾರ್ಚ್ 20, 2019
25 °C
ಹಿಂದಿ ಹೇರಿಕೆ

ಸ್ಥಳೀಯ ಭಾಷೆ ಬಗ್ಗೆ ಅಸಡ್ಡೆ, ಹಿಂದಿ ಹೇರಿಕೆಗೆ ಮುಂದಾಗಿರುವ ಕೇಂದ್ರ: ಎಸ್.ಜಿ.ಸಿದ್ದರಾಮಯ್ಯ ಆರೋಪ

Published:
Updated:
ಸ್ಥಳೀಯ ಭಾಷೆ ಬಗ್ಗೆ ಅಸಡ್ಡೆ, ಹಿಂದಿ ಹೇರಿಕೆಗೆ ಮುಂದಾಗಿರುವ ಕೇಂದ್ರ: ಎಸ್.ಜಿ.ಸಿದ್ದರಾಮಯ್ಯ ಆರೋಪ

ಯಾದಗಿರಿ: ‘ಆಯಾ ರಾಜ್ಯಗಳಲ್ಲಿನ ಸ್ಥಳೀಯ ಭಾಷೆಗಳ ಬಗ್ಗೆ ಕೇಂದ್ರ ಸರ್ಕಾರ ಅಸಡ್ಡೆ ತೋರಿದ್ದು, ಹಿಂದಿ ಹೇರಿಕೆಗೆ ಮುಂದಾಗಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಆರೋಪಿಸಿದರು.

ಇಲ್ಲಿನ ವಿದ್ಯಾಮಂಗಲದಲ್ಲಿ ಭಾನುವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿದ್ದ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹಿಂದಿ–ಇಂಗ್ಲಿಷ್, ಹಿಂದಿ –ಸಂಸ್ಕೃತ ಹೀಗೆ ಹಿಂದಿಯನ್ನೇ ಮುಂದು ಮಾಡುತ್ತಿರುವ ಕೇಂದ್ರ ರಾಜ್ಯಗಳಲ್ಲಿನ ಸ್ಥಳೀಯ ಭಾಷೆಗಳ ಅಭಿವೃದ್ಧಿಯನ್ನು ಮೊಟಕುಗೊಳಿಸಲು ಹೊರಟಿದೆ. ಪ್ರಶ್ನಿಸಿದರೆ ಮಾತೃಭಾಷಾ ನೀತಿಯನ್ನು ಮುಂದೆ ತರುತ್ತಿದೆ. ಎಷ್ಟು ರಾಜ್ಯಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್ ಮಾತೃಭಾಷೆ ಆಗಿದೆ ಎಂಬುದನ್ನು ಕೇಂದ್ರ ತೋರಿಸಲಿ. ವಿಪರ್ಯಾಸ ಎಂದರೆ ಮಾತೃಭಾಷಾ ದೃಷ್ಟಿಕೋನದಲ್ಲಿ ಸ್ಥಳೀಯ ಭಾಷೆಗಳ ಬಗ್ಗೆ ನ್ಯಾಯಾಲಯಗಳೂ ಸಹ ಹೊಸ ವ್ಯಾಖ್ಯಾನ ನೀಡುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಾತೃಭಾಷೆ ಯಾವುದೇ ಇರಲಿ, ಅಲ್ಲಿನ ಪರಿಸರದ, ನೆಲಮೂಲದ ರಾಜ್ಯ ಭಾಷೆಯೇ ಪ್ರಥಮ ಭಾಷೆಯಾಗಬೇಕು. ಆ ನಿಟ್ಟಿನಲ್ಲಿ ಕೇಂದ್ರ ಭಾಷಾ ನೀತಿಯನ್ನು ರೂಪಿಸಬೇಕು. ಆ ನೀತಿಯಲ್ಲಿ ರಾಜ್ಯ ಭಾಷೆಗಳಿಗೆ ಮೊದಲ ಆದ್ಯತೆ ನೀಡಬೇಕು’ ಎಂದು ಎಸ್.ಜಿ.ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry