ಮತ್ತೆ ಒಂದಾದ ಸಲ್ಮಾನ್, ಅಲಿ ಅಬ್ಬಾಸ್‌

7

ಮತ್ತೆ ಒಂದಾದ ಸಲ್ಮಾನ್, ಅಲಿ ಅಬ್ಬಾಸ್‌

Published:
Updated:
ಮತ್ತೆ ಒಂದಾದ ಸಲ್ಮಾನ್, ಅಲಿ ಅಬ್ಬಾಸ್‌

‘ಸುಲ್ತಾನ್’, ‘ಟೈಗರ್ ಜಿಂದಾ ಹೇ’ ಹೀಗೆ ಒಂದರ ನಂತರ ಮತ್ತೊಂದು ಎರಡು ಯಶಸ್ವಿ ಚಿತ್ರಗಳನ್ನು ನೀಡಿ ಮೋಡಿಮಾಡಿದ್ದ ಸಲ್ಮಾನ್ ಖಾನ್ ಹಾಗೂ ಅಲಿ ಅಬ್ಬಾಸ್ ಜಾಫರ್ ಅವರ ಇದೀಗ ‘ಭರತ್‌’ಗಾಗಿ ಜೊತೆಯಾಗಿದ್ದಾರೆ.

60 ವರ್ಷಗಳ ಅವಧಿಯಲ್ಲಿ ವ್ಯಕ್ತಿಯೊಬ್ಬನ ಜೀವನದಲ್ಲಿ ನಡೆಯುವ ಬದಲಾವಣೆಗಳನ್ನು ಕಟ್ಟಿಕೊಡುವ ಚಿತ್ರ ಇದಾಗಿದೆ. ಭಾರತ ಮತ್ತು ಪಾಕಿಸ್ತಾನಗಳ ವಿಭಜನೆಯ ಸಮಯದಲ್ಲಿ ನಡೆದ ಘಟನಾವಳಿಗಳು ಸಿನಿಮಾದಲ್ಲಿ ಸೆರೆಯಾಗಲಿವೆ. ವಿಭಜನೆಯ ಪೂರ್ವದ ಹಾಗೂ ನಂತರದ ಭಾರತದಲ್ಲಿ ಬದುಕುವ ವ್ಯಕ್ತಿಯೊಬ್ಬನ ಸುತ್ತ ಕಥೆ ಹೆಣೆಯಲಾಗಿದೆ. ವಿಭಜನೆಯ ಸಂದರ್ಭವನ್ನು ಪಂಜಾಬ್‌ನಲ್ಲಿ ಚಿತ್ರೀಕರಿಸಲಾಗಿದ್ದು, ಆ ಸಂದರ್ಭಕ್ಕೆ ಹೊಂದಿಕೆಯಾಗುವ ವಸ್ತ್ರವಿನ್ಯಾಸ ಹಾಗೂ ಸೆಟ್‌ಗಳನ್ನು ಬಳಸಲಾಗಿದೆ.

ಕೊರಿಯನ್ ಭಾಷೆಯ ಯಶಸ್ವಿ ಚಿತ್ರ ‘ಓಡ್‌ ಟು ಮೈ ಫಾದರ್‌’ ಆಧರಿಸಿ ಈ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಕೊರಿಯನ್ ಚಿತ್ರದಲ್ಲಿ ಕೊರಿಯನ್‌ನ ಇತಿಹಾಸದ ಹಲವು ಮಜಲುಗಳನ್ನು ನಾಯಕ ನಟ ಹವಾಂಗ್ ಜುಂಗ್‌ ಮಿನ್ ಮೂಲಕ ಪರಿಚಯಿಸಲಾಗಿದೆ. ಭರತ್‌ ಚಿತ್ರದಲ್ಲಿ ಸಲ್ಮಾನ್ ಪಾತ್ರದ ಮೂಲಕ ಭಾರತ ಇತಿಹಾಸದ ವಿವಿಧ ಹಂತಗಳ ದರ್ಶನವಾಗಲಿದೆ. ಈ ಬಗೆಯ ಪಾತ್ರದಲ್ಲಿ ಸಲ್ಮಾನ್ ಮೊದಲ ಬಾರಿ ಅಭಿನಯಿಸುತ್ತಿದ್ದಾರೆ ಎನ್ನುತ್ತಿದೆ ಚಿತ್ರತಂಡ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry