7

ಅಮೆರಿಕ: ವಾಗ್ದಂಡನೆ ವರದಿ ಅಪಹಾಸ್ಯ ಮಾಡಿದ ಟ್ರಂಪ್‌

Published:
Updated:
ಅಮೆರಿಕ: ವಾಗ್ದಂಡನೆ ವರದಿ ಅಪಹಾಸ್ಯ ಮಾಡಿದ ಟ್ರಂಪ್‌

ವಾಷಿಂಗ್ಟನ್‌: ತಮ್ಮ ವಿರುದ್ಧ ವಾಗ್ದಂಡನೆ ನಿರ್ಣಯ ಮಂಡಿಸುವ ವರದಿಗಳ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಪಹಾಸ್ಯ ಮಾಡಿದ್ದಾರೆ.

ಹಿರಿಯ ರಾಜಕಾರಣಿಗಳು ಮತ್ತು ಪತ್ರಕರ್ತರು ಭಾಗವಹಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ‘ಶ್ವೇತಭವನದಲ್ಲಿ ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಸೇರಿದಂತೆ ತಮಾಷೆ ಮಾಡುವ ವ್ಯಕ್ತಿಗಳ ಜತೆ ಈ ವಿಷಯದ ಬಗ್ಗೆ ಚರ್ಚಿಸಿದ್ದೇನೆ. ವಾಗ್ದಂಡನೆಗೆ ಗುರಿಪಡಿಸಲಾಯಿತೇ ಎಂದು ಪೆನ್ಸ್‌ ಪ್ರತಿ ದಿನ ಕೇಳುತ್ತಾರೆ. ಯಾವುದೇ ಅಪರಾಧ ಮಾಡದೇ ಇದ್ದಾಗ ಇಂತಹ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಅದನ್ನು ಕಡೆಗಣಿಸಬೇಕು. ಈ ವಿಷಯದ ಬಗ್ಗೆ ಗಮನ ನೀಡುವ ಅಗತ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.

ಬಳಿಕ ಮಾಧ್ಯಮಗಳ ವಿರುದ್ಧ ಟ್ರಂಪ್‌ ವಾಗ್ದಾಳಿ ನಡೆಸಿದರು. ಅದರಲ್ಲೂ ಪ್ರಮುಖವಾಗಿ ಸಿಎನ್‌ಎನ್‌ ಮತ್ತು ನ್ಯೂಯಾರ್ಕ್‌ ಟೈಮ್ಸ್‌ ಧೋರಣೆಗಳನ್ನು ಲೇವಡಿ ಮಾಡಿದರು.

ಉತ್ತರ ಕೊರಿಯಾದ ಬಗ್ಗೆಯೂ ಪ್ರಸ್ತಾಪಿಸಿದ ಅವರು, ’ಅಲ್ಲಿನ ಸರ್ವೋಚ್ಛ ನಾಯಕ ಕಿಮ್‌ ಜಾಂಗ್‌ ಉನ್‌ ಅವರ ಜತೆ ನೇರ ಮಾತುಕತೆ ನಡೆಸುವುದನ್ನು ತಳ್ಳಿ ಹಾಕುವುದಿಲ್ಲ. ಮಾತುಕತೆ ಆರಂಭಿಸುವಂತೆ ಉತ್ತರ ಕೊರಿಯಾ ಸಹ ಕೇಳಿದೆ. ಆದರೆ, ಮೊದಲು ಅಣ್ವಸ್ತ್ರಗಳನ್ನು ನಿಷ್ಕ್ರಿಯಗೊಳಿಸಬೇಕು ಎನ್ನುವ ಸೂಚನೆ ನೀಡಲಾಗಿದೆ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry