ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಸನಿಹ ಆಸ್ಟ್ರೇಲಿಯಾ

Last Updated 4 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಡರ್ಬನ್‌: ಏಡನ್‌ ಮರ್ಕರಮ್ (143; 216 ಎ, 19 ಬೌಂ) ಮತ್ತು ಕ್ವಿಂಟನ್ ಡಿ ಕಾಕ್‌ ಅಮೋಘ ಬ್ಯಾಟಿಂಗ್ ಮಾಡಿದರು. ಆದರೆ ಅಂತಿಮ ಓವರ್‌ಗಳಲ್ಲಿ ತಿರುಗೇಟು ನೀಡಿದ ಆಸ್ಟ್ರೇಲಿಯಾ ಜಯದ ಸನಿಹದಲ್ಲಿದೆ.

ಇಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಜಯ ಗಳಿಸಲು ಪ್ರವಾಸಿ ತಂಡಕ್ಕೆ ಒಂದು ವಿಕೆಟ್‌ ಅಗತ್ಯವಿದೆ. 417 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಬೆಳಕಿನ ಅಭಾವದಿಂದ ದಿನದಾಟ ಮುಕ್ತಾಯಗೊಂಡಾಗ ಒಂಬತ್ತು ವಿಕೆಟ್‌ಗಳಿಗೆ 293 ರನ್ ಗಳಿಸಿದೆ.

ಐದು ವಿಕೆಟ್‌ಗಳಿಗೆ 136 ರನ್‌ ಗಳಿಸಿದ್ದ ದಕ್ಷಿಣ ಆಫ್ರಿಕಾ ಸುಲಭವಾಗಿ ಸೋಲೊಪ್ಪಿಕೊಳ್ಳುವತ್ತ ಸಾಗಿತ್ತು. ಆದರೆ 147 ರನ್‌ಗಳ ಜೊತೆಯಾಟ ಆಡಿದ ಆರಂಭಿಕ ಬ್ಯಾಟ್ಸ್‌ಮನ್‌ ಮರ್ಕರಮ್‌ ಮತ್ತು ವಿಕೆಟ್ ಕೀಪರ್‌ ಡಿ ಕಾಕ್‌ ಭರವಸೆ ಮೂಡಿಸಿದರು.

ಆದರೆ ಮರ್ಕರಮ್ ವಿಕೆಟ್ ಉರುಳಿದ ಬೆನ್ನಲ್ಲೇ ತಂಡ ಸೋಲಿನ ಪ್ರಪಾತಕ್ಕೆ ಬಿದ್ದಿತು. ಏಳು ರನ್‌ಗಳ ಅಂತರದಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಡಿಕಾಕ್ (81; 138 ಎ, 11 ಬೌಂ) ಮತ್ತು ಮಾರ್ನ್ ಮಾರ್ಕೆಲ್‌ ಕ್ರೀಸ್‌ನಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರ್‌
ಆಸ್ಟ್ರೇಲಿಯಾ, ಮೊದಲ ಇನಿಂಗ್ಸ್‌:
351, ದಕ್ಷಿಣ ಆಫ್ರಿಕಾ, ಮೊದಲ ಇನಿಂಗ್ಸ್‌: 162; ಆಸ್ಟ್ರೇಲಿಯಾ, ದ್ವಿತೀಯ ಇನಿಂಗ್ಸ್‌: 227; ದಕ್ಷಿಣ ಆಫ್ರಿಕಾ, ಎರಡನೇ ಇನಿಂಗ್ಸ್‌: 89 ಓವರ್‌ಗಳಲ್ಲಿ 9ಕ್ಕೆ 293 (ಏಡನ್‌ ಮರ್ಕರಮ್‌ 143,ಬ್ರುಯಿನ್‌ 36, ಕ್ವಿಂಟನ್ ಡಿಕಾಕ್‌ 81; ಮಿಷೆಲ್ ಸ್ಟಾರ್ಕ್‌ 74ಕ್ಕೆ4, ಜೋಶ್‌ ಹ್ಯಾಜಲ್‌ವುಡ್‌ 57ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT