ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶ ಬರುವ ಮೊದಲೇ ಮುಖ್ಯಮಂತ್ರಿಗಳು ‘ಮಾಯ’

Last Updated 4 ಮಾರ್ಚ್ 2018, 19:30 IST
ಅಕ್ಷರ ಗಾತ್ರ

* ‘ನವ ಕರ್ನಾಟಕ ವಿಷನ್- 2025‘ ಕಾರ್ಯಕ್ರಮದಲ್ಲಿ ಅಳವಡಿಸಿದ್ದ ಪರದೆಯಲ್ಲಿ ಕನ್ನಡ ಶಬ್ದಗಳು ತಪ್ಪಾಗಿ ಬಿತ್ತರವಾದದ್ದು ಕನ್ನಡಕ್ಕೆ ಅವಮಾನ. ಹಿಂಭಾಗದಲ್ಲಿ ಅಳವಡಿಸಿದ್ದ ಪರದೆ ಕನ್ನಡದ ಶಬ್ದಗಳ ಜೊತೆಗೆ ಮುಖ್ಯಮಂತ್ರಿ ಅವರ ಹೆಸರನ್ನು ‘ಸಿದ್ದರಾಮಾಯ’ ಎಂದು ಬಿಂಬಿಸಿತು. ಚುನಾವಣಾ ಫಲಿತಾಂಶ ಬರುವ ಮೊದಲೇ ಮುಖ್ಯಮಂತ್ರಿಗಳು ‘ಮಾಯ’. ಇದು ವಾಸ್ತವ ಕೂಡ.

–ಸದಾನಂದ ಗೌಡ, ಕೇಂದ್ರ ಸಚಿವ

* ನನ್ನ ಕನ್ನಡ ಪದಪುಂಜ ಅಣಕಿಸಿದ ಶಿಖಾಮಣಿಗಳೆ ನೋಡಿ ನಾಡಿನಪ್ರಭು, ಕನ್ನಡ ರಾಜ್ಯ ಆಳುತ್ತಿರುವ ಮಹನೀಯರ ವೇದಿಕೆ ಹಿನ್ನೋಟ...! ಆ್ಯಪ್ ಕೈಕೊಡುವ ಒತ್ತಕ್ಷರಕ್ಕೆ ವ್ಯಾಕರಣ ಪಂಡಿತರಂತೆ ಬಿಟ್ಟಿ ಬೋಧನೆಗೆ ಸಾಲುನಿಂತು ನರ್ತನ ಮಾಡಿದರಲ್ಲಾ! ಇದನುಡಿಯಲು ಯಾಕೆ ನಿಮ್ಮ ಸೊಲ್ಲು ಅಡಗಿತು. ಅವರು ನೀಡಿದ ದೇಣಿಗೆ ಕುರುಡಾಗಿಸಿತೇ ನಿಮ್ಮ ಕಣ್ಣುಗಳನ್ನು! #ಕನ್ನಡಿಗ

–ಜಗ್ಗೇಶ್, ನಟ

* 4 ವರ್ಷಗಳಲ್ಲಿ ಇಲ್ಲದ ಕನ್ನಡ ಪ್ರೀತಿ ಈಗ ಚುನಾವಣೆ ಹತ್ತಿರ ಅಂತ ಬಂದಿದೆಯಾ? ಒಂದೇ ಭಾರತ ಒಂದೇ ಭಾಷೆ ಅನ್ನುತ್ತಿದ್ದವರು ಈಗ ಕನ್ನಡದಲ್ಲಿ ಟ್ವೀಟ್! ಅದು ರಾಜ್ಯಕ್ಕೆ ಸಂಬಂಧವಿಲ್ಲದ ವಿಷಯದ ಮೇಲೆ. 1) ನಿಮ್ಮ ಈ ಕನ್ನಡ ಕಾಳಜಿ ಮಹದಾಯಿ ವಿಷಯದಲ್ಲಿ ಯಾಕೆ ಇಲ್ಲ? 2) ಎಸ್‌ಎಸ್‌ಸಿ  ಎಕ್ಸಾಮ್ಸ್ ಹಿಂದಿ, ಇಂಗ್ಲಿಷ್‌ನಲ್ಲಿ ಮಾತ್ರ ಇದೆ, ಇಲ್ಲಿ ತಮ್ಮ ಕನ್ನಡ ಪ್ರೀತಿ ಎಲ್ಲಿ?

(ಯುವಜನರ ಬಗ್ಗೆ ಪ್ರಧಾನಿ ಕನ್ನಡದಲ್ಲಿ ಮಾಡಿರುವ ಸರಣಿ ಟ್ವೀಟ್‌ಗೆ ಪ್ರತಿಕ್ರಿಯೆ)

–ರಮೇಶ್‌ ಸಿ. ಗೌಡ, @Rameshgowda_c

* ಓಹೋ ನೋಡ್ರಪ್ಪೋ, ಚುನಾವಣೆ ಹತ್ರ ಬರ್ತಿದ್ದಂಗೆ ಬಿಡದಿ ರಸ್ತೆ ಕಾಮಗಾರಿ ತುಂಬ ವೇಗವಾಗಿ ನಡೀತಿದೆ. ಛೇ, ಆರು ತಿಂಗಳಿಗೆ ಒಮ್ಮೆ ಚುನಾವಣೆ ಇದ್ದಿದ್ರೆ ನಮ್ಮ ರಾಷ್ಟ್ರ ಯಾವತ್ತೋ ವಿಶ್ವಗುರು ಆಗಿರ್ತಿತ್ತು.

ಮಹೇಶ್‌ ಮೇಗಲಟ್ಟಿ, @maheshmegalatti

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT