ತಿಂಗಳಾಯಗೆ ನಿರಾಸೆ

ಬುಧವಾರ, ಮಾರ್ಚ್ 20, 2019
31 °C

ತಿಂಗಳಾಯಗೆ ನಿರಾಸೆ

Published:
Updated:
ತಿಂಗಳಾಯಗೆ ನಿರಾಸೆ

ಬರ್ಮಿಂಗ್‌ಹ್ಯಾಂ: ಭರವಸೆಯ ಅಥ್ಲೀಟ್, ಭಾರತದ ಸಿದ್ಧಾಂತ್ ತಿಂಗಳಾಯ ಅವರು ವಿಶ್ವ ಒಳಾಂಗಣ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ನಿರಾಸೆ ಅನುಭವಿಸಿದ್ದಾರೆ. 60 ಮೀಟರ್ಸ್‌ ಹರ್ಡಲ್ಸ್‌ನ ಹೀಟ್ಸ್‌ನಲ್ಲೇ ವಿಫಲರಾದ ಅವರು ನಾಲ್ಕರ ಘಟ್ಟಕ್ಕೆ ಪ್ರವೇಶಿಸಲಿಲ್ಲ.

ಹೀಟ್ಸ್‌ನಲ್ಲಿ 7.93 ಸೆಕೆಂಡುಗಳಲ್ಲಿ ಗುರಿ ತಲುಪಿದ ಅವರು ಅವರು ಆರನೇ ಸ್ಥಾನ ಗಳಿಸಿದರು. ನಾಲ್ಕು ಹೀಟ್ಸ್‌ನ ಅಗ್ರ ನಾಲ್ಕು ಮಂದಿಯನ್ನು ಸೆಮಿಫೈನಲ್‌ಗೆ ಪರಿಗಣಿಸಲಾಗುತ್ತದೆ.

ಅಮೆರಿಕದಲ್ಲಿ ತರಬೇತಿ ಪಡೆಯುತ್ತಿರುವ 27 ವರ್ಷದ ತಿಂಗಳಾಯ ಕಳೆದ ವರ್ಷ 7.70 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು. ಇದು ಅವರ ಗರಿಷ್ಠ ವೈಯಕ್ತಿಕ ಸಾಧನೆ ಆಗಿದೆ. ಅಮೆರಿಕದಲ್ಲಿ ಕಳೆದ ತಿಂಗಳು ನಡೆದಿದ್ದ ಕೂಟವೊಂದರಲ್ಲಿ ಅವರು 7.83 ಸೆಕೆಂಡು ಸಾಧನೆ ಮಾಡಿದ್ದರು.

ವಿಸಾ ಸಮಸ್ಯೆಯಿಂದಾಗಿ ಮಾರ್ಚ್ ಒಂದರಂದಷ್ಟೇ ಅವರಿಗೆ ಇಲ್ಲಿಗೆ ತಲುಪಲು ಸಾಧ್ಯವಾಗಿದೆ. ಪಟಿಯಾಲದಲ್ಲಿ ಸೋಮವಾರ ಆರಂಭವಾಗುವ ಫೆಡರೇಷನ್ ಕಪ್‌ ರಾಷ್ಟ್ರೀಯ ಅಥ್ಲೆಟಿಕ್ ಕೂಟದಲ್ಲಿ ಅವರು 110 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ಸ್ಪರ್ಧಿಸುವ ನಿರೀಕ್ಷೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry