‘2.0’ ಚಿತ್ರದ ಟೀಸರ್‌ ಸೋರಿಕೆ

7

‘2.0’ ಚಿತ್ರದ ಟೀಸರ್‌ ಸೋರಿಕೆ

Published:
Updated:
‘2.0’ ಚಿತ್ರದ ಟೀಸರ್‌ ಸೋರಿಕೆ

ಚೆನ್ನೈ: ನಟ ರಜನಿಕಾಂತ್‌ ಅಭಿನಯಿಸಿರುವ ‘2.0’ ಚಲನಚಿತ್ರದ ಟೀಸರ್‌ ಸಾಮಾಜಿಕ ಮಾಧ್ಯಮಗಳಲ್ಲಿ ಭಾನುವಾರ ಸೋರಿಕೆಯಾಗಿದೆ.

ಈ ಚಲನಚಿತ್ರದ ನಿರ್ಮಾಪಕ ಸುಭಾಸ್ಕರನ್‌ ಅಲ್ಲಿರಾಜಾ ಅವರ ಜನ್ಮ ದಿನದಂದು ಗಣ್ಯ ವ್ಯಕ್ತಿಗಳಿಗೆ ಮಾತ್ರ ಟೀಸರ್‌ನ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸೋರಿಕೆಯಾಗಿರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಅದ್ದೂರಿ ಬಜೆಟ್‌ನ ಈ ಚಲನಚಿತ್ರವನ್ನು ಶಂಕರ್‌ ಅವರು ನಿರ್ದೇಶಿಸಿದ್ದಾರೆ. ಹಿಂದಿ ಸಿನಿಮಾ ನಟ ಅಕ್ಷಯಕುಮಾರ್‌ ಮತ್ತು ನಟಿ ಅಮಿ ಜಾಕ್ಸನ್‌ ಹಾಗೂ ತಮಿಳು ಚಲನಚಿತ್ರ ರಂಗದ ಹಲವು ಖ್ಯಾತ ನಟರು ಈ ಚಿತ್ರದಲ್ಲಿದ್ದಾರೆ. ಎ.ಆರ್‌. ರೆಹಮಾನ್‌ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದಾರೆ.

‘ಎಂಥಿರನ್‌’ ಚಲನಚಿತ್ರದ ಬಳಿಕ ರಜನಿಕಾಂತ್‌ ಮತ್ತು ಶಂಕರ್‌ ಜೋಡಿಯ ಎರಡನೇ ಚಿತ್ರ ಇದಾಗಿದೆ. ಟೀಸರ್‌ ಸೋರಿಕೆ ಬಗ್ಗೆ ರಜನಿಕಾಂತ್‌ ಮಗಳು ಸೌಂದರ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಅಧಿಕೃತವಾಗಿ ಬಿಡುಗಡೆ ಮಾಡುವ ಮುನ್ನವೇ ಈ ರೀತಿಯ ಸೋರಿಕೆಯಾಗುವುದನ್ನು ಸಹಿಸಬಾರದು ಮತ್ತು ಪ್ರೋತ್ಸಾಹಿಸಬಾರದು. ಕೆಲವು ಸೆಕೆಂಡ್‌ಗಳ ಉತ್ಸಾಹಕ್ಕಾಗಿ ಕಠಿಣ ಪರಿಶ್ರಮ, ಪ್ರಯತ್ನಗಳನ್ನು ಕಡೆಗಣಿಸಲಾಗಿದೆ. ಚಲನಚಿತ್ರ ನಿರ್ಮಾಣದಲ್ಲಿ ಭಾಗಿಯಾದವರ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ. ಇದೊಂದು ಹೃದಯಹೀನ ಕೃತ್ಯ’ ಎಂದು ಸೌಂದರ್ಯ ಟ್ವೀಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry