ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸೌಂದರ್ಯದ ಸ್ವರೂಪ ಹಾಳಾಗುತ್ತಿದೆ

Last Updated 4 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಭಾಷೆಯ ಸೌಂದರ್ಯದ ಸ್ವರೂಪ ಇತ್ತೀಚೆಗೆ ಹಾಳಾಗುತ್ತಿದೆ ಎಂದು ಲೇಖಕ ಹಿರೇಮಗಳೂರು ಕಣ್ಣನ್‌ ಕಳವಳ ವ್ಯಕ್ತಪಡಿಸಿದರು.

ಅಂಕಿತ ಪುಸ್ತಕ ಪ್ರಕಾಶನ ಭಾನುವಾರ ಇಲ್ಲಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕನ್ನಡ ಅಪ
ವಿತ್ರವಾಗಬಾರದು’ ಎಂದರು.

‘ವೃದ್ಧ ದಂಪತಿಗೆ ದಂತಭಾಗ್ಯ ಯೋಜನೆ, ಹಲ್ಲು ಸೆಟ್ಟು ವಿತರಣೆ, ಹೀಗೊಂದು ಯೋಜನೆ, ಯೋಚನೆ... ಇದನ್ನು ಅಚ್ಚ ಕನ್ನಡದಲ್ಲಿ ಹೇಳುವುದಾದರೆ ಸರ್ಕಾರದ ಹಲ್‌ಕಟ್‌ ಯೋಜನೆ’ ಎಂಬ ಡುಂಡಿರಾಜ್‌ ಅವರ ಚುಟುಕು ಕಾವ್ಯವನ್ನು ಓದಿದ ಅವರು, ‘ಬೊಕ್ಕಸ ಖಾಲಿ ಮಾಡಿ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡುತ್ತದೆ. ಅವಿವೇಕಿ ಯೋಜನೆಗಳಿಂದಾಗುವ ತಾಪತ್ರಯಗಳನ್ನು ವಿವೇಕ ಇರುವ ಬರಹಗಾರರು ತಿಳಿಸುತ್ತಿದ್ದಾರೆ’ ಎಂದರು.

ಎಲ್‌.ಎಸ್‌. ಶೇಷಗಿರಿ ರಾವ್‌ ಅವರ ಇಂಗ್ಲಿಷ್‌ ಕವನಗಳ ಪರಿಚಯ ‘ಕಾವ್ಯೋದ್ಯಾನ’, ಎಚ್‌. ಡುಂಡಿರಾಜ್‌ ಅವರ ಲಘು ಧಾಟಿಯ ಪ್ರಬಂಧಗಳ ಸಂಕಲನ ‘ನೊಣಾನುಬಂಧ’, ಡಾ. ವ್ಯಾಸರಾವ್‌ ನಿಂಜೂರ್‌ ಅವರ ‘ಶ್ರೀ ಚಾಮುಂಡೇಶ್ವರಿ ಭವನ’ ಕಾದಂಬರಿ, ಹಿರೇಮಗಳೂರು ಕಣ್ಣನ್‌ ಅವರ ಲೇಖನ
ಗಳ ಸಂಕಲನ ‘ನುಡಿಪೂಜೆ’ ಪುಸ್ತಕಗಳನ್ನು ಸಾಹಿತಿ ಡಾ. ಎಚ್‌. ಎಸ್‌. ವೆಂಕಟೇಶಮೂರ್ತಿ ಬಿಡುಗಡೆಗೊಳಿಸಿದರು.

‘ಎಲ್‌.ಎಸ್‌. ಶೇಷಗಿರಿ ರಾವ್‌ ಅವರು ಕಾವ್ಯದ ಸವಿಯನ್ನು ಪರಿಚಯಿಸಿದವರು. ಅವರು ಸದಾ ಪುಸ್ತಕದ ಅಧ್ಯಯನದಲ್ಲಿ ತೊಡಗಿರುತ್ತಾರೆ. ನನ್ನ ಎಲ್ಲಾ ಬರಹಗಳನ್ನುಓದಿ ಪ್ರೋತ್ಸಾಹ ನೀಡಿದ್ದಾರೆ’ ಎಂದು  ವೆಂಕಟೇಶಮೂರ್ತಿ ಅವರು ತಿಳಿಸಿದರು.

‘ಶ್ರೀಚಾಮುಂಡೇಶ್ವರಿ ಭವನ’  ಹಾಗೂ ‘ನುಡಿಪೂಜೆ’ ಕೃತಿಗಳು ಕಾದಂಬರಿ 2ನೇ ಮುದ್ರಣ ಕಂಡಿವೆ.

ಪುಸ್ತಕಗಳ ದರ
* ಕಾವ್ಯೋದ್ಯಾನ (192 ಪುಟ) ₹ 195

* ನೊಣಾನುಬಂಧ (200ಪುಟ) ₹ 195

* ಶ್ರೀ ಚಾಮುಂಡೇಶ್ವರಿ ಭವನ (304 ಪುಟ), ₹ 295

* ನುಡಿಪೂಜೆ ( 256 ಪುಟ), ₹ 250

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT