ಕಾಮಗಾರಿ ವೆಚ್ಚದಲ್ಲಿ ಭಾರಿ ಏರಿಕೆ

ಗುರುವಾರ , ಮಾರ್ಚ್ 21, 2019
25 °C

ಕಾಮಗಾರಿ ವೆಚ್ಚದಲ್ಲಿ ಭಾರಿ ಏರಿಕೆ

Published:
Updated:
ಕಾಮಗಾರಿ ವೆಚ್ಚದಲ್ಲಿ ಭಾರಿ ಏರಿಕೆ

‘ಕೇಂದ್ರ ಸರ್ಕಾರದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಲ್ಲಿ 359 ಯೋಜನೆಗಳ ಕಾಮಗಾರಿಗಳ ವೆಚ್ಚದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ’ ಎಂದು ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದ ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.

* ₹ 150 ಕೋಟಿಗಿಂತ ಹೆಚ್ಚು ವೆಚ್ಚದ ಯೋಜನೆಗಳನ್ನು ಸಚಿವಾಲಯವು ಪರಿಶೀಲನೆಗೆ ಆಯ್ಕೆ ಮಾಡಿಕೊಂಡಿತ್ತು.

* 1,289 ಪರಿಶೀಲನೆಗೆ ಆಯ್ಕೆ ಮಾಡಿಕೊಂಡಿದ್ದ ಯೋಜನೆಗಳು

* 359 ವೆಚ್ಚದಲ್ಲಿ ಏರಿಕೆ ಕಂಡಿರುವ ಯೋಜನೆಗಳು

* 297 ಅನುಷ್ಠಾನ/ಕಾಮಗಾರಿ ವಿಳಂಬವಾಗಿರುವ ಯೋಜನೆಗಳು

* 312 ನಿಗದಿತ ಅವಧಿಯಲ್ಲಿ ಹಂತಹಂತವಾಗಿ ಕಾಮಗಾರಿ ಪೂರ್ಣಗೊಳ್ಳುತ್ತಿರುವ ಯೋಜನೆಗಳು

* 15 ಕಾಲಮಿತಿಗಿಂತಲೂ ಬೇಗನೇ ಕಾಮಗಾರಿ ಮುಗಿಯಲಿರುವ ಯೋಜನೆಗಳು

* ಉಳಿದ ಯೋಜನೆಗಳ ಬಗ್ಗೆ ಮಾಹಿತಿ ಲಭ್ಯವಿಲ್ಲ

* ಕಾಮಗಾರಿ ವಿಳಂಬ ಮತ್ತು ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆಯಿಂದ ವೆಚ್ಚದಲ್ಲಿ ಏರಿಕೆಯಾಗಿದೆ.

* ಭೂಸ್ವಾಧೀನದಲ್ಲಿನ ವಿಳಂಬ, ಅರಣ್ಯ ಇಲಾಖೆಯ ಅನುಮತಿ, ಸಾಮಗ್ರಿ ಪೂರೈಕೆಯಲ್ಲಿ ಅಡಚಣೆ, ಹಣ ಮಂಜೂರು ಆಗುವಲ್ಲಿ ತೊಡಕು, ನಕ್ಸಲರ ದಾಳಿ ಮತ್ತು ಕೆಲವು ಸ್ಥಿರಾಸ್ತಿ ವ್ಯಾಜ್ಯಗಳಿಂದ ಯೋಜನೆಗಳ ಕಾಮಗಾರಿಯಲ್ಲಿ ವಿಳಂಬವಾಗಿದೆ.

ಆಧಾರ: ಪಿಟಿಐ, ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry