ದಾಖಲೆವೀರ ರೋಜರ್‌ ಬ್ಯಾನಿಸ್ಟರ್

7

ದಾಖಲೆವೀರ ರೋಜರ್‌ ಬ್ಯಾನಿಸ್ಟರ್

Published:
Updated:
ದಾಖಲೆವೀರ ರೋಜರ್‌ ಬ್ಯಾನಿಸ್ಟರ್

ಲಂಡನ್‌: ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಟ್ರ್ಯಾಕ್‌ನಲ್ಲಿ 1954ರಲ್ಲಿ ಇತಿಹಾಸ ನಿರ್ಮಾಣವಾಗಿತ್ತು. 25 ವರ್ಷ ವಯಸ್ಸಿನ ವೈದ್ಯಕೀಯ ವಿದ್ಯಾರ್ಥಿ ರೋಜರ್‌ ಬ್ಯಾನಿಸ್ಟರ್‌ ಒಂದು ಮೈಲು ದೂರವನ್ನು (1.6 ಕಿ.ಮೀ) ನಾಲ್ಕೇ ನಿಮಿಷದಲ್ಲಿ ಓಡಿ, ದಾಖಲೆ ನಿರ್ಮಿಸಿದ್ದರು.

ಆ ದಿನ ಉದ್ಘೋಷಕರು ಫಲಿತಾಂಶವನ್ನು ಪ್ರಕಟಿಸಲು ಬಹಳಷ್ಟು ಸಮಯ ತೆಗೆದುಕೊಂಡರು.   ಬಹಳ ಹೊತ್ತಿನ ನಂತರ ‘...ದಿ ಒನ್‌ ಮೈಲ್‌: ಫಸ್ಟ್‌, ನಂಬರ್‌ ಫಾರ್ಟಿ ಒನ್‌, ಆರ್‌.ಜಿ. ಬ್ಯಾನಿಸ್ಟರ್‌... ದಿ ಟೈಮ್‌ ವಾಸ್‌ ಥ್ರೀ’. ಇದನ್ನು ಕೇಳಿದ್ದೇ ಪ್ರೇಕ್ಷಕರು ರೋಮಾಂಚಿತರಾದರು.

3 ನಿಮಿಷ 59.4 ಸೆಕೆಂಡ್‌ಗಳಲ್ಲಿ ಬ್ಯಾನಿಸ್ಟರ್‌ ಗುರಿಮುಟ್ಟಿದ್ದು. ಈ ದಾಖಲೆಯನ್ನು ಕೆಲವೇ ವಾರಗಳಲ್ಲಿ ಅವರ ಪ್ರತಿಸ್ಪರ್ಧಿ ಅಥ್ಲೀಟ್‌, ಆಸ್ಟ್ರೇಲಿಯಾದ ಜಾನ್‌ ಲ್ಯಾಂಡಿ ಮುರಿದರು.

ಇದು ಸ್ಥಳೀಯ ಕ್ರೀಡಾಕೂಟ ಆಗಿದ್ದುದರಿಂದ ಪ್ರೇಕ್ಷಕರ ಸಂಖ್ಯೆ ಕಡಿಮೆ ಇತ್ತು. ಆದರೆ ದಾಖಲೆ ವಿಷಯ ಹೊರ ಜಗತ್ತಿಗೆ ತಿಳಿದ ನಂತರ ಅವರು ಪ್ರಶಂಸೆಗೆ ಪಾತ್ರರಾಗಿದ್ದರು. ಕೆಲವು ವರ್ಷಗಳ ನಂತರ ಅವರು ಖ್ಯಾತ ನರರೋಗ ತಜ್ಞರಾಗಿ ಹೆಸರು ಮಾಡಿದ್ದರು.

1963ರಿಂದ ಹಲವು ವರ್ಷ ಅವರು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಿದ್ದರು.  ಅವರಿಗೆ ನೈಟ್‌ಹುಡ್ ಗೌರವ ನೀಡಲಾಗಿತ್ತು.

ರೋಜರ್‌ ನಿಧನ

ಸರ್ ರೋಜರ್‌ ಬ್ಯಾನಿಸ್ಟರ್‌ (88) ಶನಿವಾರ ನಿಧನರಾದರು.

ರೋಜರ್ ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿರುವ ಬ್ರಿಟಿಷ್ ಪ್ರಧಾನಿ ತೆರೆಸಾ ಮೇ ‘ರೋಜರ್ ಅವರು ಅಪ್ರತಿಮ ಕ್ರೀಡಾಪಟು ಆಗಿದ್ದು ಸಾವಿರಾರು ಮಂದಿಗೆ ಪ್ರೇರಣೆಯಾಗಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry